ಬೆರೆತಾಕ್ಷಣ
ಅವನ ಕಣ್ಣೊಳಗೆ ಬಿಂಬವಾಗಿ ಬೆರೆತೆ
ಅವನ ಉಸಿರೊಳಗೆ ಎದೆಯ ಬಡಿತವಾಗಿ ಬೆರೆತೆ
ವಿಶಾಲ ಮನಸ್ಸಿನ ಪುಟ್ಟ ಎದೆಗೆ ಒರಗಿ
ಬಿಸಿ ಮುತ್ತ ನೀಡಿ ಅವನೊಳಗೆ ಬೆರೆತು ಹೋದೆ
ಹಣೆಯ ಮೇಲೆ ಸಿಹಿಮುತ್ತ ನೀಡಿ ನಡು ಬಳಸಿ ಬರಸೆಳೆದು ಮಾಯದ ಕನಸೊಳಗೆ ಬಿಗಿದಪ್ಪಿ ಪ್ರೀತಿಯ ಬಲೆಯಲ್ಲಿ ಬಂಧಿಸಿ ಹೃದಯ ಬಡಿತದೋಳಗೆ ಬೆರೆಸಿದನು
- ರವಿಕುಮಾರ
11 Sep 2015, 06:01 pm
Download App from Playstore: