ಏನೆಂದು ಬಣ್ಣಿಸಲಿ...

ಏನೆಂದು ಬಣ್ಣಿಸಲಿ....!

ಏನೆಂದು ಬಣ್ಣಿಸಲಿ...!
ಇದ್ದವುಗಳ.,
ಹೊಸದೊಂದು ಸೃಷ್ಟಿಸಲಾಗದಕ್ಕೆ,
ದೃಷ್ಟಿಯಲ್ಲಿ ಎಲ್ಲವೂ ಅದ್ಭುತ
ಗಮನಿಸಲು ದೃಷ್ಟಿದೋಷ.

ಏನೆಂದು ಬಣ್ಣಿಸಲಿ.....!
ನಿನ್ನ ರಂಗವನ್ನು.,
ನಿಮ್ಮ ನಿಮ್ಮ ರಂಗಕ್ಕೆ ಶ್ರೇಷ್ಟ ನೀವೆ,
ಗುಂಡಿ ತೋಡುವವರು ಬೇರೆಯವರೆ
ನಿನ್ನ ಎತ್ತರದಲ್ಲಿ ನೋಡಲಾಗದ ದೋಷ.

ಏನೆಂದು ಬಣ್ಣಿಸಲಿ ....!
ಭಕ್ತಿಯನ್ನು.,
ತನ್ನ ಹಿತಕ್ಕಾಗಿ ಬೇರೆಯವರ ಬೆವರಿಂದ
ಅಭಿಷೇಕ ಮಾಡಿ ತಾನು ಅರ್ಚಕನಾಗಿ
ನಾನೆ ಸರ್ವನೆಂಬ ಅಧಿಕಾರ ದೋಷ.

ಏನೆಂದು ಬಣ್ಣಿಸಲಿ....!
ಎಲ್ಲದಕ್ಕೂ ಬಾಗಿಲು ಬೀಗ.,
ತನ್ನದಲಾದಾಲ್ಲೆವು ತನ್ನದೆಂದು ಅಪ್ಪುವ
ತಾನು ಇಲ್ಲಿನವನಲ್ಲ ಎಂಬುದಾ ಮರೆತ
ಮಾಸಿದ ಕಣ್ಣು, ನಂಬಿಕೆ ದೋಷ.

ಏನೆಂದು ಬಣ್ಣಿಸಲಿ ...!
ಸೂರ್ಯನ ಕಿರಣ ದಿಕ್ಕು ಬದಲಿಸಿದರೆ.,
ಗುರತ್ವಾಕರ್ಷಣೆ ಬಲ ಬತ್ತಿದರೆ.,
ಭೂಗೋಳ ಇನ್ನಿಲ್ಲದೆ ಜಾರಿದರೆ.,
ನಾನ್ನಿಲ್ಲದ ನಾನು, ಭ್ರಮೆಯ ದೋಷ.

ಏನೆಂದು ಬಣ್ಣಿಸಲಿ.....!
ದುರ್ನಾತದ ಸವಿಯ ತನ್ನೋಡಲೋಳಗೆ
ಇಟ್ಟು .ಸವಿಗಾಳಿ ನೀಡಿ ಜೀವಿಗಳ ಬದುಕಿಗೆ.
ಬೇಕಾದನೆಲ್ಲ ಬದಿಗಿರಿಸಿ ಬೇಡದ್ದನೆಲ್ಲ ಬದುಕಿಸಿ ಬಂಡಾಗಿರುವ ನಾ, ಅತಿಯಾಸೆ ದೋಷ


-- ಈಶ,ಎಂ.ಸಿ.ಹಳ್ಳಿ

- ಈಶ, ಎಂ.ಸಿ.ಹಳ್ಳಿ

10 Sep 2015, 04:10 pm
Download App from Playstore: