ಮದರಂಗಿ ಚಿತ್ತಾರದಲಿ
ಮದರಂಗಿ ಚಿತ್ತಾರದಲಿ
ಅಂಗೈಯಲಿ ಅವನ ಹೆಸರ
ಬಿಡಿಸುವಾಗ ...
ನೆನಪಿಸದಿರು ನನ್ನ
ಕಂಬನಿಯ ತಡೆಯಲು ನಾನಿರಲಾರೆ ಜೋಕೆ ...!!!
ಮದುವೆಯ ಸಡಗರದಿ
ಸಖಿಯರ ಸರಸದಿ
ನೀ ನಗುವಾಗ
ನೆನಪಿಸದಿರು ನನ್ನ
ನನ್ನೆದೆಯ ಕೂಗು
ಕೇಳಿಸೀತು ಜೋಕೆ...!!!
ಅವನು ಕಾದು ಕುಳಿತಿರಲು
ಒಳಸೇರಿ ಕದ ಹಾಕುವ ಮುನ್ನ
ನೆನಪಿಸದಿರು ನನ್ನ
ಕೈ ಹಿಡಿದು ರಮಿಸಲು
ನಾನಿರಲಾರೆ ಜೋಕೆ ..!!!
ನಾವಂದು ನಡೆದ ಬೀದಿಯಲಿ
ಹೆಗಲಿಗೆ ಜೊತೆಯಾಗಿ
ಅವನ ಜೊತೆ ನಡೆವಾಗ
ನೆನಪಿಸದಿರು ನನ್ನ
ಹೆಜ್ಜೆಗಳು ತಾಳ ತಪ್ಪಬಹುದು
ಎಡವದಂತೆ ಕಾಯಲು
ನಾನಿರಲಾರೆ ಜೋಕೆ ...!!!
✒ಸಿರಾಜ್ ಗಡಿಯಾರ್
- ಸಿರಾಜ್
04 Sep 2015, 07:57 pm
Download App from Playstore: