ಕಾರಣ......

ಕಾರಣ....


ಕಾರಣದ ಉದಾಹರಣೆ ಉದ್ದವಾದಾಗ
ಸಾಂಬಾರಿಗೆ ವಗ್ಗರಣೆ ಜಾಸ್ತಿ ಅದಾಂಗೆ.
ಕಾರಣದ ಕಣ್ಣು ಮನಸ್ಸಿನಲ್ಲಿ ಇದ್ದಾಗ,
ಕಂಡಿದ್ದೇಲ್ಲ ಕುರುವು ಕಾರಣವಾದಂಗೆ.

ಕಾರಣದ ಕಾಲು ನಡೆಯಾದಾಗ,
ಕಲ್ಲು ಮುಳ್ಳಿನ ದಾರಿಯಾದಂಗೆ.
ಕಾರಣದ ಬಾಗಿಲು ತೆರೆದಾಗ,
ಖಾರ ಉಪ್ಪು ಕೆರೆದಂಗೆ.

ಕಾರಣದ ಪ್ರೀತಿ ಪ್ರಿಯೆಯಾದಾಗ,
ಹೃದಯದ ಬಡಿತ ಸತ್ತಂಗೆ.
ಕಾರಣದ ಕೋಲು ಉರುಗೋಲದಾಗ,
ಯವ್ವನದಕಾಂತಿ ಮುಪ್ಪಿನಂಗೆ.

ಕಾರಣ ಉಕ್ಕುವ ಹಾಲದಾಗ,
ಮದಿರೆಯ ರಕ್ತದ ದೇಹದಂಗೆ.
ಕಾರಣ ಕನಸಿನ ದೃಶ್ಯವಾದಾಗ,
ದುರಂತ ಸಿನಿಮಾ ನಾಯಕನಂಗೆ.


---ಈಶ,ಎಂ.ಸಿ.ಹಳ್ಳಿ

- ಈಶ, ಎಂ.ಸಿ.ಹಳ್ಳಿ

28 Aug 2015, 06:09 am
Download App from Playstore: