ರಕ್ಷಾಕವಚ

ಅಂದು,
ಹುಮಾಯುನ್ ರಾಜನಿಗೆ
ರಾಣಿ ಕರ್ಮವತಿಯು
ಕಟ್ಟಿದಳು...ರಾಖಿ.,
ಅಲೆಗ್ಸಾಂಡರ್ ರಾಜನಿಗೆ
ಪುರೂರವನ ಹೆಂಡತಿ
ಕಟ್ಟಿದಳು...ರಾಖಿ,
ಇಂದು,
ಕಾಡಿಸುವ ಹುಡುಗನಿಗೆ
ಹೆದರಿದ ಹುಡುಗಿ
ಕಟ್ಟುವಳು....ರಾಖಿ,
ಅಂದು,
ಪತಿರಾಯ ಯುದ್ದಕೆ ಹೋಗುವಾಗ
ಪತ್ನಿ ಕಟ್ಟುತಿದ್ದಳು ರಾಖಿ,
ಇಂದು,
ಸಹೋದರ ಸಹೋದರಿಯರ ಸಂಬಂಧ
ದೃಢವಾಗಲು ಕಟ್ಟುವರು ರಾಖಿ,
ಅಂದು,
ದೇವದಾನವರಲ್ಲಿ ಯುದ್ದವಾಗಲು
ದಾನವರೇ ಮೇಲುಗೈ ಸಾಧಿಸಲು
ಶಚಿೀದೆೇವಿ ಇಂದ್ರನಿಗೆ ಕಟ್ಟಿದಳು
ಅಂದಿನಿಂದ ರಾಖಿಹಬ್ಬ ಪ್ರಾರಂಭವಾಯಿತೆೇ?
ಕೈಗೆ ಕಟ್ಟಿದೊಡನೆ ಬದಲಾಗುವುದೇ
ಮೊದಲಿದ್ದ ಭಸವನೆ ?
ಅಣ್ಣನೆಂದು ಕರೆದು ಕಟ್ಟಿದೊಡನೆ
ಮಾಯವಾಗುವುದೇ ಕಾಮನೆ?

ಕಥೆ,ಕಲ್ಪನೆ,ಪುರಾಣ ಏನೆೇ ಹೇಳಲಿ,

ಶ್ರಾವಣ ಮಾಸದ ಪೂರ್ಣಿಮೆಯಂದು
ಪ್ರೀತಿ,ರಕ್ಷಣೆ,ಒಲವು,ಬಾಂಧವ್ಯ ಮಿಂದು
ಅರಿತು ಸಂಬಂಧ ಹಿಂದು ಮುಂದು
ಆಚರಿಸೊೋಣವೆೇ ನಾವೆಲ್ಲಾ ಒಂದು.

- santoshBP

23 Aug 2015, 03:55 pm
Download App from Playstore: