ನಿರೀಕ್ಷೆ
ಕೊಡವದಿರಿ ನನ್ನ. ದುಪ್ಪಟೆಯನ್ನು ಅದರಲ್ಲಿ
ರಾತ್ರಿ ಹೆಣೆದ ಕನಸುಗಳ ರಾಶಿ ಇದೆ
ಚೆಲ್ಲಿ ಛಿದ್ರವಾಗಿ ನಲುಗಿ ಹೋಗುತ್ತವೆ
ಅವು ಭಾವದ ಕಾವಿನಲ್ಲಿ
ಕಂಗಳ ಗೂಡಿನೊಳಗೆ
ಕಣ್ತೆರೆಯುವ ಹಸಿ ಕನಸುಗಳು
ಕೊಲ್ಲದಿರಿ ಕೊಡವದಿರಿ ಜೋರಾಗಿ, ಜೋಕೆ ಜಾರಿ ಹೋಗಿ,ಬರದಿರಬಹುದು ಮತ್ತೆ
ಬಿಟ್ಟು ಹೋದ ಈ ಗೂಡಿನೊಳಗೆ
ಧೂಳಿದ್ದರೇನು ಆ ಧೂಳಿನ ತುಂಬಾ ನನ್ನ.
ಕನಸುಗಳ ಕಂಪು ಹರಡಿದೆ
ಚೆಲ್ಲಿದ ಕನಸುಗಳನ್ನು ಒಟ್ಟು ಮಾಡಿ ಮನದ ಮೂಲೆಯಲ್ಲಿ ರಾಶಿ ಹಾಕಿ
ಮತ್ತೆ ರಾತ್ರಿಯ. ತಂಪಿನಲ್ಲಿ
ಕಾವು ಕೊಡುತ್ತೆನೆ
ಬೆಚ್ಚಗಿಡುತೇನೆ ಜೋಪಾನ
ಮಾಡುತೇನೆ
ಮಧ್ಯರಾತ್ರಿಯ ಮಬ್ಬುಗತ್ತಲಿನ ಮಡಿಲಲ್ಲಿ
ಚುಕ್ಕಿಗಳ. ಹೊಳಪನ್ನು ನಾಚಿಸುವಂತೆ
ಕಣ್ಣು ಬಿಡಬಹುದು ಒಮ್ಮೆ
ನನ್ನ. ಈ ಕನಸ್ಸುಗಳು
ಎಂಬ ನಿರೀಕ್ಷೆ ಯಲ್ಲಿ.
....
-ಆಶಾದೀಪಾ
(ನಿರೀಕ್ಷಿತ)
- ashadeepa
10 Aug 2015, 06:01 pm
Download App from Playstore: