ವರ್ಷ ಹೊಸದು..

ವರ್ಷ ಹೊಸದು

ವರ್ಷ ಹೊಸದು ಹೊಸೆವ ಹರ್ಷ
ಬಾನಿನ ಕಿರಣ ಸೇರಲಿ ಕರಣ
ಬಣ್ಣ ಸುಣ್ಣ ಬಳೆವ ಮನ
ನಡೆಗಳೆಲ್ಲ ನುಡಿಯಲಿ ದಿನ ದಿನ.

ಮೂಡಣ ಪಡುವಣ ಪಡೆಯಲಿ
ಕಂಕಣ
ಗಂಗ ತುಂಗ ಅರಿಯಲಿ ಹಸಿರಿಗೆ
ಸಯ್ಯಾದ್ರಿ ಹಿಮಾದ್ರಿ ಬೆಳೆಯಲಿ ಉಸಿರಿಗೆ
ಬೆರಳು ಕಡೆಯಲಿ ಕೆಸರಿನ ಮೊಸರಿಗೆ.

ವಸಂತ ಕೋಗಿಲೆ ವಂದಿಸಲಿ
ನಿಷಯಲಿ ನೆಂದವರ ಬಂಧಿಸಲಿ
ಪಾತರಗಿತ್ತಿ ಪೂಷ್ಪ ಸಂಧಿಸಲಿ
ಉಸಿರು ಗಾಳಿ ಘಮ ಘಮ ಗಂಧಿಸಲಿ.

ಉಳಿ ಸುತ್ತಿಗೆ ಸ್ಪರ್ಷಸಲಿ ಕಲೆಗೆ
ರಾಗದ ಬಿದಿರು ಕರೆಯಲಿ ಕೊಳಲಿಗೆ
ನುಡಿವ ಪದ ಪದ್ಯವಾಗಲಿ ಹಾಡಿಗೆ
ಹಗಲು ಇರುಳು ಗದ್ಯವಾಗಲಿ ಜಾಡಿಗೆ.

-ಈಶ, ಎಂ.ಸಿ.ಹಳ್ಳಿ

- ಈಶ, ಎಂ.ಸಿ.ಹಳ್ಳಿ

09 Aug 2015, 04:12 pm
Download App from Playstore: