ಜಂಗುಳಿಯೊಳಗೊಬ್ಬ ಜಂಗಮ
ಜಂಗುಳಿಯಲೊಬ್ಬ ಜಂಗಮ
ತುಂಬಿ ತುಳುಕುತಿಹ ರಸ್ತೆಯೊಂದರಲಿ ಚೈನು ಕಿತ್ತ ಬೈಸಿಕಲ್ಲಿನಲಿ ಅದೃಷ್ಟವನ್ನು ಹೊತ್ತು ಹೊರಟವನು ನಾನು....
ಹೆಜ್ಜೆ ಹೆಜ್ಜೆಗಳ ನಡುವಿನ ಸಮಯದಲಿ ಹಾದು ಹೋಗಿವೆ ಅಪರಿಮಿತ ಮೋಟರು ವಾಹನಗಳು ಇನ್ನಾವುದೋ ಇಂಧನವು ಹೊತ್ತು...
ಅದೋ ಅಲ್ಲಾರೋ ನೆಡೆದೆ ಹೋಗುತಿಹ ನನಗಿಂತ ಮುಂದೆ ಅದಾವುದೋ ಚೀಲವ ಹೆಗಲಿಗೇರಿಸಿ....
ಭಾಗಶಃ ಅವನ ಕೊಳೆತ ಬಟ್ಟೆಗಳ ನೋಡಿದರೆ ಅದವನ ಪರಿಶ್ರಮದ ಮೂಟೆಯೇ ಇರಬೇಕು....
ಇಲ್ಲಾರೋ ನಾನು ಚೈನು ಸರಿಮಾಡಹೊರಟಾಗ ಕುಂಟುತ್ತ ಹೋದವ ಕಣ್ಣಿಗೆಟುಕದಷ್ಟು ದೂರ ಸಾಗಿಹನು.....
ಅದೋ ಬಂತು ಇಳಿಜಾರು ನಾನು ಹೋಗಬಹುದೀಗ ಬೈಸಿಕಲ್ಲ ಏರಿ ಎಲ್ಲರಿಗಿಂತ ವೇಗವಾಗಿ......
ಆದರೇ ಆ ವೇಗ ತಗ್ಗಿತ್ತು ಇಳಿಜಾರು ಮುಗಿಯುವುದರೊಳಗಾಗಿ...
ತಲುಪಲಿಲ್ಲ ನಾ ಇದ್ದ ಸಮಯ ಮುಗಿಯುದೊರಳಗಾಗಿ....
ಪ್ರೀತಿಯಿಂದ
ನಯನ್ ಅರೇಹಳ್ಳಿ
- ನಯನ್ ಅರೇಹಳ್ಳಿ
09 Aug 2015, 04:03 pm
Download App from Playstore: