ಅನ್ವೇಷಣೆ
ಅನ್ವೇಷಣೆ
ದೂರದೂರಿನ ಜನರ ಗುಂಪಿನಲಿ ನಮ್ಮವರು ಯಾರಾದರೂ ಕಾಣಬಹುದೆಂಬ ಅನ್ವೇಷಣೆ ....
ಕಪ್ಪು ಬಿಳುಪಿನ ಈ ಬದುಕಲಿ ಬಣ್ಣವ ತುಂಬುವ ಯಾರಾದರೂ ಸಿಗಬಹುದೆಂಬ
ಅನ್ವೇಷಣೆ ....
ಬದುಕ ಜಂಜಾಟಗಳ ದೂರವಿಟ್ಟು ನೆಮ್ಮದಿಯನೆಲ್ಲಿ ಹುಡುಕಬಹುದೆಂಬ ಅನ್ವೇಷಣೆ.....
ಸುಖದ ಕಾರಣಗಳ , ದುಃಖದ ಮೂಲಗಳ, ಹುಟ್ಟು ಸಾವುಗಳ ಅನ್ವೇಷಣೆ ...
ಸತ್ತ ಮೇಲೆ ಏನೇನಾಗಬಹುದು.. ??
ಸ್ವರ್ಗದ ದಾರಿಗಳ ಹುಡುಕಲು , ನರಕದ ಕೂಪಗಳ ಮರೆಮಾಚಲು , ಅನ್ವೇಷಣೆ.........
ಅನ್ವೇಷಣೆಗಳೆಲ್ಲ ಮುಗಿದ ದಿನ ಯಾತ್ರೆ ಸಾಗುತ್ತಿರೆ ... ಅನ್ವೇಷಣೆಗಳಲ್ಲಿ ಕಳೆದುಕೊಂಡ ಸ್ನೇಹ - ಸಂಬಂಧಗಳಿಗೆ ಅನ್ವೇಷಣೆ........
ನಯನ್ ಅರೇಹಳ್ಳಿ
- ನಯನ್ ಅರೇಹಳ್ಳಿ
09 Aug 2015, 04:00 pm
Download App from Playstore: