ಬಣ್ಣ...
ಬಣ್ಣ
.....
ಬಣ್ಣ ಲೇಪಿಸುವ ಕೈ, ಬಣ್ಣದಲ್ಲೇ ಬಣ್ಣಿಸುವ ಕೃತಿ.
ತೆರೆದ ನೋಟದ ಕಣ್ಣು, ಓದುತ್ತಿದೆ ಆಕೃತಿ.
ತನ್ನೆಲ್ಲ ಭಾವನೆಯ ಬಯಕೆ ಬರೆಯಬಲ್ಲದು ಪುಟಗಟ್ಟಲೆ.
ಪ್ರಕಾಶಕರ ಚೌಕಾಸಿ ಪ್ರಖರವಾದಗ ಕಟ್ಟುವುದು ಗಂಟಲೆ.
ಬೇರು ಬುಡದಲ್ಲಿ ಮಣ್ಣ ಮಡಿಲಲ್ಲಿ ಸಂಚಾರ.
ಇನಿಯನ ಪಾತ್ರೆಯಲ್ಲಿ ಮೈಮನಗಳ ಆಚಾರ.
ಕಣ್ಣಿನ ಅಂದಕೆ ಕಾಡಿಗೆಯ ಕೊಡುಗೆ
ಕಾಮನಬಿಲ್ಲಿನ ರುಚಿ ಯಾವ ಪಾತ್ರೆಯ ಅಡುಗೆ .
ನಿತ್ಯ ಸತ್ಯದೊಡನೆ ಚಲಿಸುವ ಗಾಳಿಯ ಮನ
ಎಲ್ಲರ ಎಲ್ಲದೊರಳಗಿನ ಧ್ವನಿ ವರಸೂಸುವ ಗಾನ.
ಅಂತಿಮ ಯಾತ್ರೆಯಲ್ಲಿ ಬಣ್ಣ ಲೇಪಗಳ ಜಾತ್ರೆ .
ದೇರಾದರು ನಮ್ಮಳಗಲ್ಲ ಫೋಟೋ ಕಟ್ಟಿ ನಲ್ಲಿ ನಿತ್ರೆ.
--ಈಶ,ಎಂ.ಸಿ.ಹಳ್ಳಿ ...........
- ಈಶ, ಎಂ.ಸಿ.ಹಳ್ಳಿ
08 Aug 2015, 09:35 pm
Download App from Playstore: