ಪಾರದರ್ಶಕತೆ..
- ಪಾರದರ್ಶಕತೆ
ಪಾರದರ್ಶಕತೆ ನನ್ನೊಳಗಿದೆ
ನನ್ನ ಆದರ್ಶ ನೆರವಿದೆ
ಆದರೂ ನೆರವಿಗೆ ಬರುತ್ತಿಲ್ಲ
ಮನಸ್ಸಿನ ಆಟವ....
ಸಂಸ್ಕಾರದ ಸುಳಿ ನನ್ನೊಳಗಿದೆ
ನನ್ನ ಆದರ್ಶ ನೆರವಿದೆ
ಆದರೂ ನೆರವಿಗೆ ಬರುತ್ತಿಲ್ಲ
ನಡತೆಯ ಕಾಟವ......
ದಿಟ್ಟತನ ದಾರಿ ನನ್ನೊಳಗಿದೆ
ನನ್ನ ಆದರ್ಶ ನೆರವಿದೆ
ಆದರೂ ನೆರವಿಗೆ ಬರುತ್ತಿಲ್ಲ
ದೃಷ್ಟಿ ದೋಷವ......
ಜಾತ್ಯಾತೀತ ಜನ್ಮ ನನ್ನೊಳಗಿದೆ
ನನ್ನ ಆದರ್ಶ ನೆರವಿದೆ
ಆದರೂ ನೆರವಿಗೆ ಬರುತ್ತಿಲ್ಲ
ಜಾತಿಯ ಬಂಧನವ.....
ಹೋರಾಟದ ಹೊಳಹೊರಮೈ ನನ್ನೊಳಗಿದೆ
ನನ್ನ ಆದರ್ಶ ನೆರವಿದೆ
ಆದರೂ ನೆರವಿಗೆ ಬರುತ್ತಿಲ್ಲ
ಹಣದ ಅಪ್ಪಣೆಯ......
--ಈಶ,ಎಂ.ಸಿ.ಹಳ್ಳಿ ....
- ಈಶ, ಎಂ.ಸಿ.ಹಳ್ಳಿ
08 Aug 2015, 09:29 pm
Download App from Playstore: