ನಗು ಚೆಲ್ಲು
ಮರೆತಾದರೂ
ಮನೆಯಯ ಬಳಿ ಬರಬಾರದೆ
ಅತ್ತು ಕಾಡಿದವನಲ್ಲ
ಮುತ್ತು ಬೇಡಿದವನಲ್ಲ
ಚಿತ್ತ ನಿನ್ನೊಳು ಒತ್ತೆಯಿಟ್ಟೆನಲ್ಲ
ಮರೆತಾದರೂ ಒಮ್ಮೆ
ಮನಸಿನ ಕದ
ತಟ್ಟ ಬಾರದೆ
ಸಂತೆಯಲಿ ಒಂಟಿಯಾದಂತೆ
ಸೊಂಟ ಮುರಿದು
ಕುಂಟನಾದಂತೆ
ನೆಂಟರಿಷ್ಟರ ನಡುವೆ
ಕಂಠ ಬಿಗಿದು ಮೌನಿಯಾದೆ
ಮರೆತಾದರೂ ಒಮ್ಮೆ
ನಗೆಯ ಮಲ್ಲಿಗೆ
ಚೆಲ್ಲಬಾರದೆ
..........ಮಧುಗಿರಿ ಬದರಿ
- K.Badarinatha
07 Aug 2015, 02:11 pm
Download App from Playstore: