ಎದೆ ಹಾಲು
ಒಂಭತ್ತು ತಿಂಗಳು ಹೊತ್ತಿರುವೆ
ಹೆತ್ತು ಸಾಕಿ ಸಲಹುವೆ
ಕೆಲಸದ ಒತ್ತಡಗಳ ನಡುವೆ
ಸ್ತನ್ಯಪಾನ ಕನಿಕರಿಸುವೆ//
ಬರೀ ಹಾಲಲ್ಲ ಅಮ್ೃ್್ತವುಾ
ನಿನ್ನ ಎದೆಯಾಳದ ಜೀವವು
ನಿಸ್ವಾರ್ಥದಿಂದ ನೀ ಕೊಡುವೆ
ನವಜಾತ ಶಿಶು ನಾ ಕುಡಿವೆ//
ಹೊಟ್ಟೆ ತುಂಬಿಸಲು ಹಾತೊರೆವೆ
ರೋಗನಿರೋಧಕ ಶಕ್ತಿ ತುಂಬಿವೆ
ನಿಸ್ವಾರ್ಥ. ಮಾತಾಯಿ ನೀನು
ಸ್ತನ್ಯಪಾನ ಪಡೆದ ನಾ ಧನ್ಯ//
ಊಟ ಬಟ್ಟೆಗಾಗಿ ನಿರಂತರ ಕಲಹ
ಬಂದಿದೆ ಸ್ತನ್ಯಪಾನ ಸಪ್ತಾಹ
ಅಮ್ಮ ಉಣ್ಣಿಸು ಎದೆಹಾಲು
ನಮಿಸುವೆ ಸ್ಪರ್ಶಸಿ ಕೈಕಾಲು
- santoshBP
05 Aug 2015, 03:07 am
Download App from Playstore: