ಬಾ......
ಬಾ.......
ಕಾವ್ಯದ ಕನ್ನಿಕೆ ಕರೆದಳು
ಇಂದು ಮರಳಿ ಬಾ.
ಹೃದಯದ ಕುಲುಮೆ ಕಾಯುತ್ತಿದೆ
ಮಿಂದು ಅರಳಿ ಬಾ.
ಮನೆ ಮನೆಯ ಕೆಂಡದ
ಬಿಂದು ಹೊತ್ತಿಸಿ ಬಾ.
ಬಿಡಿಯಾದ ಮನದ ಮಣಿಗಳ
ಸಂದಿನಲ್ಲಿ ದಾರ ಪೋಣಿಸಿ ಬಾ.
ಹೂವಿನ ವಾಸನೆ ಸವೆಯುವ ನಾಸಿಕನ
ಬಂಧುವ ವರಸಿ ಬಾ.
ಕನ್ನಡಕದ ಕಣ್ಣಿಗೆ ಗಾಜಿನ
ಅಂಶ ಸವರಿ ಬಾ.
ಮುಗಿಸಿ ಬಾ ನಗಿಸಿ ಬಾ
ಎಂದೆನ್ನ ಕರೆದು.
ವರದಿಗೆ ವರದಿಯೇ ಪೆನ್ನು
ಕಾವ್ಯದ ಕನ್ನಿಕೆಯೇ ಇನ್ನು ...
- ಈಶ,ಎಂ.ಸಿ.ಹಳ್ಳಿ......
- ಈಶ, ಎಂ.ಸಿ.ಹಳ್ಳಿ
02 Aug 2015, 10:25 am
Download App from Playstore: