ಮೊಗ್ಗು
ಹೂವಿನ ಮೊಗ್ಗು
ಹಾಲುಗೂಸು
ಅರಿಯದ ಹರೆಯದ ಕನ್ನೆ
ಎಷ್ಟು ಚೆನ್ನ!
ಹೂವರಳಿ
ಕಂದ ಬೆಳೆದು
ಕನ್ನೆ ಹಸೆಯೇರಿ
ಬಾಳು ಮತ್ತಷ್ಟು ಚನ್ನ!
ಕಾಲದ ಚಕ್ರ
ಇದ್ದಲ್ಲೇ ತಿರುಗದೆ
ಹೊಸ ಹೊಸ ಪ್ರಪಂಚಕ್ಕೆ
ಕೊಂಡೊಯ್ಯುವುದು
ಚನ್ನಕಿಂತ ಚನ್ನ!
- ನಂದೀಶ
21 Jul 2015, 10:49 am
Download
App from Playstore: