ನಿಸರ್ಗ

ನಿಸರ್ಗ
———
ಏನೆಂದು ಬಣ್ಣಿಸಲೀ ನಿನ್ನ
ಬರೀ ಸುಂದರ ನೋಟವೇ
ನೆಲ ಜಲ
ಗಿಡ ಮರ
ಸೂರ್ಯ ಚಂದ್ರ
ಪ್ರಾಣಿ ಪಕ್ಷಿ
ಹೆಣ್ಣು ಗಂಡು?
ಅಲ್ಲ. ನೀನೇ ಸ್ವರ್ಗ.

ಏನೆಂದು ಬಣ್ಣಿಸಲೀ ನಿನ್ನ
ಬರೀ ಇಂಪಾದ ಶಬ್ದವೇ
ಗಾಳಿಯ ಸುಂಯ್ ಸುಂಯ್
ನೀರಿನ ಜುಳು ಜುಳು
ಹಾಡಿನ ಗುನುಗುನು
ಪ್ರೇಮಿಗಳ ಪಿಸುಪಿಸು?
ಅಲ್ಲ. ನೀನೇ ಸಮರಸ.

ಏನೆಂದು ಬಣ್ಣಿಸಲೀ ನಿನ್ನ
ಬರೀ ಜ್ಞಾನ ವಿಜ್ಞಾನವೇ
ಖಗೋಳ ಭೂಗೋಳ
ಭೌತ ರಸಾಯನ
ತಾಂತ್ರಿಕ ವೈದ್ಯಕೀಯ
ಜಾಮಿಟ್ರಿ ಸಿಮಿಟ್ರಿ?
ಅಲ್ಲ. ನಿನ್ನ ಬಣ್ಣಿಸಲು
ನನ್ನಲ್ಲಿ ಪದಗಳೇ ಇಲ್ಲ.

- ನಂದೀಶ

21 Jul 2015, 10:47 am
Download App from Playstore: