ಎಲ್ಲವೂ ಸಾಧ್ಯ ಗುರೂ

ಎಲ್ಲವೂ ಸಾಧ್ಯ ಗುರೂ!
-------------------------------
ಹುಲ್ಲುಗಾವಲಿನಲ್ಲಿ ಒಂಟೆ
ಮರಳುಗಾಡಿನಲ್ಲಿ ಜಿಂಕೆ
ಎಲ್ಲವೂ ಸಾಧ್ಯ ಗುರೂ!

ಬೆಟ್ಟಗುಡ್ಡಗಳಲ್ಲಿ ಬೆಕ್ಕು
ಹೊಲಗದ್ದೆಗಳಲ್ಲಿ ಮೀನು
ಎಲ್ಲವೂ ಸಾಧ್ಯ ಗುರೂ!

ಐಐಟಿಗಳಲ್ಲಿ ದಡ್ಡರು
ರಾಜಕಾರಣದಲ್ಲಿ ಸಂತರು
ಎಲ್ಲವೂ ಸಾಧ್ಯ ಗುರೂ!

ಪಿಎಚ್ ಡಿ ಪೀವನ್
ಡಿಗ್ರಿಯಿಲ್ಲದ ಮಂತ್ರಿ
ಎಲ್ಲವೂ ಸಾಧ್ಯ ಗುರೂ!

ವೈದ್ಯರಲ್ಲಿ ಕಟುಕರು
ಅರ್ಚಕರಲ್ಲಿ ನಾಸ್ತಿಕರು
ಎಲ್ಲವೂ ಸಾಧ್ಯ ಗುರೂ!

ಹಾಲಿನಲ್ಲಿ ಯೂರಿಯ
ಕೋಲಾದಲ್ಲಿ ಹಾಲಾಹಲ
ಎಲ್ಲವೂ ಸಾಧ್ಯ ಗುರೂ!

ನಿರಕ್ಷರಿಗೆ ಡಿಗ್ರಿ
ಅದಕ್ಷನಿಗೆ ಪದಕ
ಎಲ್ಲವೂ ಸಾಧ್ಯ ಗುರೂ!

ರಿಲೀಫ್ ನಿಧಿಗೆ ಲಕ್ಷ ದಾನ
ಅಪ್ಪ ಅಮ್ಮನಿಗೆ ವೃಧ್ಧಾಶ್ರಮ
ಎಲ್ಲವೂ ಸಾಧ್ಯ ಗುರೂ!

ಕೈನೆಕ್ಕುವ ಹುಲಿಮರಿ
ಕತ್ತು ಕುಯ್ಯುವ ಕೆಲಸದಾಳು
ಎಲ್ಲವೂ ಸಾಧ್ಯ ಗುರೂ!

ಇಂಟರ್ನೆಟ್ ಲೋಕದಲ್ಲಿ ಧ್ಯಾನ
ಮನೆ ತುಂಬಾ ಮೌನ
ಎಲ್ಲವೂ ಸಾಧ್ಯ ಗುರೂ!

ಕಾಡಿನಲ್ಲಿ ರೆಸಾರ್ಟ್
ಊರಿನಲ್ಲಿ ಚಿರತೆ
ಎಲ್ಲವೂ ಸಾಧ್ಯ ಗುರೂ!

- ನಂದೀಶ

21 Jul 2015, 10:41 am
Download App from Playstore: