ನೆನಪು

ಹಾರ ತುರಾಯಿಗಳು ಸರಳು ಸರಪಣಿಯಂತೆ
ಭವ್ಯದರಮನೆಯು ಅರಗಿನರಮನೆಯಂತೆ
ನೀನಿಲ್ಲದ ನನ್ನಬಾಳು ಹಗ್ಗ ಜಗ್ಗುವ ನಾಯಿಯಂತೆ

ತವರೆಂಬ ತಾಣವು ನನಗೆ ಸವತಿಯ ಸೆರಗಂತೆ
ಮತ್ತೆ ಮತ್ತೆ ತವರ ಸೆರಗಿನ ಹಿಂದೆ
ನೀ ಹೀಗೆ ಸುತ್ತಿ ಸುತ್ತಿ
ಮಿತಿ ಮೀರಿದರೆ ಎಲ್ಲೆ
ನಾನಾವ ಸೆರಗ ಸುತ್ತಲಿ ನಲ್ಲೆ ?

ಪುಟ್ಟ ಕಂದನ ನೆನಪು
ನಿನ್ನ ನಗುವಿನ ಒನಪು
ವಿರಹದ ಅರಗಿನ
ಅರಮನೆಯ ತೊರೆದು
ನನ್ನೆದೆಯ ಅರಮನೆಯಲ್ಲರಳಿದೆ

ಹೊತ್ತು ಜಾರುವ ಮುನ್ನ
ಹಕ್ಕಿ ಗೂಡು ಸೇರುವ ಮುನ್ನ
ಗೋಧೂಳಿ ಹಾರುವ ಮುನ್ನ
ಮನೆಗೆ ಬಾ ಚಿನ್ನ ...

..........ಮಧುಗಿರಿ ಬದರಿ

- K.Badarinatha

15 Jul 2015, 04:56 am
Download App from Playstore: