ಕನಸು ಮನಸು

ಸುಪ್ತ ಮನಸಿನಲಿ
ನಿನ್ನದೇ ಗುಂಗು
ಮಿಂಚುವ ನಯನದಲಿ
ನಾಚಿಕೆ ರಂಗು

ಹಾದಿಕಾಯುತ ಮನಸು
ಕನಸು ಕಂಡಿತು
ಕನಸುಕಾಣುತ ಮನಸು
ಮೈಮರೆಸಿತು

ಬಯಕೆಯ ಕನಸು
ಮನಸು ಬಯಸಿತು
ಕನಸು ನನಸಿನ ಮನಸು
ನಿನ್ನ ಬಯಸಿತು


ಕಣ್ಣುಬಿಟ್ಟರೆ ಕನಸು ಹಾರಿತು
ನನಸಾಗಿ ಮನಸು ಜಾರಿತು
ಜಾರಿದ ಮನಸಿನ ಕನಸಿನಲಿ
ಶೃಂಗಾರಮೂಡಿತು

.....ಮಧುಗಿರಿ ಬದರಿ

- K.Badarinatha

28 May 2015, 06:03 am
Download App from Playstore: