ಲಲ್ಲೆ

ಎದ್ದು ಬಿದ್ದು ಬಂದೆನಲ್ಲೆ
ಆಸೆ ತಡಿಯಲಾರೆ
ಕದ್ದು ಕದ್ದು ನೋಡಬ್ಯಾಡ
ಕನಸು ಕಾಣಲಾರೆ

ಕುಂಟುನೆಪವ ಹೇಳಿಕೊಂಡು
ನೀರಿಗಂತ ಬಾರೆ
ಅಪ್ಪ ಅಮ್ಮ ಮನೆಯಲಿಹರು
ಸುಳ್ಳು ಹೇಳಲಾರೆ

ಪ್ರೀತಿ ಪ್ರೇಮ ಮಾಡಿದ್ಮೇಲೆ
ಹೆದ್ರೊದಂತು ಏಕೆ ?
ಒಂಟಿಯಾಗಿ ಸಿಕ್ಕಿ ಬಿಟ್ರೆ
ತಂಟೆ ಮಾಡೋದ್ಯಾಕೆ ?

ತುಂಟ ನಗೆಯ ಬೀರಿ ಬಂದು
ನೆಂಟನಾಗ ಬಲ್ಲೆ
ಎಂಟದೆಯ ಭಂಟ ನೀನು
ಸುಮ್ನೆ ಬೇಡ ಲಲ್ಲೆ

ಪೈಪೋಟಿಯಾಟ ಬೇಡ ಜಾಣೆ
ನಿನ್ನ ಗೆಲ್ಲಲಾರೆ
ಪೋಲಿಯಾಟ ಬೇಡ ಜಾಣ
ಲಾಲಿ ಹಾಡಲಾರೆ

..........ಮಧುಗಿರಿ ಬದರಿ

- K.Badarinatha

21 May 2015, 04:32 am
Download App from Playstore: