ಬಾಲ್ಯದ ಒಂದು ಕನಸು

08072012
ಅಮ್ಮ ನಿನ್ನ ತೊಡೆಯ ಮೇಲೆ
ಸ್ವಲ್ಪಹೊತ್ತು ಮಲಗಲೆ
ಕಣ್ಣನು ಮುಚ್ಚಿ ಕನಸನು ಕಾಣುತ
ನನ್ನನು ನಾನು ಮರೆಯಲೆ
ತಲೆಯನು ಸವರು ಎದೆಯನು ತಟ್ಟು
ಕನಸಿನ ಲೋಕಕೆ ಹೋಗುವೆನು
ನನ್ನದೇ ಲೋಕದಿ ನಾನೆ ರಾಜನು
ಎಲ್ಲರು ನನ್ನ ಸೇವೆಯ ಮಾಡುವರು
ವಜ್ರದ ಕೀರೀಟ ಚಿನ್ನದ ಹಾರ
ಹಾಕಿಕೊಂಡು ಸಿಂಹಾಸನದಲಿ ಕೂರುವೆನು
ಬಗೆ ಬಗೆ ತಿಂಡಿ ಬಗೆ ಬಗೆ ಹಣ್ಣು
ತನ್ನಿರಿ ಎಂದು ಆಜ್ಞೆಯ ಮಾಡುವೆನು
ಒಂದೊಂದೇ ತಿಂಡಿ ಒಂದೊಂದೇ ಹಣ್ಣು
ಕಡಿಯುತ ತಿನ್ನುತ ಅಗಿಯುತ ನುಂಗುತ
ಕೊಬ್ಬುತ ಹಿಗ್ಗುತ ದೊಡ್ಡವನಾಗಿ ಬೆಳೆಯುವೆನು
ದುಡಿಮೆಯ ಮಾಡಿ ಹಣವನು ಗಳಿಸಿ
ಅಮ್ಮ ನಿನ್ನನು ನೋಡಿಕೊಳುವೆನು

- ಚೇತನ್ ಬಿ ಸಿ

16 May 2015, 03:07 pm
Download App from Playstore: