ಸುಖಿ ಯಾರೂ ಇಲ್ಲ
ನೂರೊಂದು ಸಂತಸಗಳ ಸಂಭ್ರಮವಿದ್ದರೂ
ಸುಖಿ ಯಾರೂ ಇಲ್ಲ....
ಗತಿಸಿದ ನೋವೊಂದ ಹಿಡಿದು
ಗಳಿಸಿದ ಈ ದಿನವ ಮರೆಯೋ
ದುಃಖಿಗಳೇ ಎಲ್ಲ.....
ಅದಾವ ಮಾಯಗಾರನೋ
ಈ ವಿಧಿ ಬರೆಯುವವನು
ನಿರ್ಜೀವ ದೇಹವದು
ನೀರ ಮೇಲೆ ತೇಲುತಿದೆ....
ಜೀವಂತ ತನುವದು
ಮತ್ತೇಕೆ ಮುಳುಗುತಿದೆ....?
- ಸಿರಾಜ್
12 May 2015, 04:28 pm
Download App from Playstore: