ಅಮ್ಮ
ಮಮತೆಯ ಮಡಿಲಲ್ಲಿ
ಜೋಗುಳದ ನುಡಿಯಲ್ಲಿ
ಸಕ್ಕರೆ ನಿದ್ರೆ ಅಮ್ಮನ ಮಡಿಲಲ್ಲಿ
ಮುಂಜಾನೆ ಎಬ್ಬಿಸಿ
ನಿತ್ಯಕರ್ಮವ ಮಾಡಿಸಿ
ರುಚಿಯಾದ ಹಾಲುಣಿಸೆ
ಮಖದಲ್ಲಿ ಮೂಡುವುದು ಮಂದಾಹಸ
ಅಮ್ಮನ ಹೀರುತ
ಕಾಲಲ್ಲಿ ಒದೆಯುತಿರೆ
ತಲೆಯ ಸವರುವಳು
ನಸುನಗೆಯ ಬೀರುತ
ಸ್ವರ್ಗವನೆ ಸೆರಗಿನಲಿ
ಸೆರೆಹಿಡಿದ ಸುಂದರಿ
ಪುಟ್ಟ ಕಂದನ ಪಾಲಿಗೆ
ಯಕ್ಷಲೋಕದ ಕಿನ್ನರಿ
..........ಮಧುಗಿರಿ ಬದರಿ
- K.Badarinatha
11 May 2015, 02:44 am
Download App from Playstore: