ಮೈಸೂರಿನ ಹುಲಿ
ದೇಶಕ್ಕಾಗಿ ರಣರಂಗದಲ್ಲೆ ಅಂತ್ಯಗೊಂಡ
ಟಿಪ್ಪುಸುಲ್ತಾನ್ ಶಹೀದಾದ ದಿನವಿಂದು
ಬ್ರಿಟೀಷರ ಜೊತೆ ಕೆಳ ದೇಶದ್ರೋಹಿಗಳು
ಕೇಕೆ ಹಾಕಿದ ದಿನವಿಂದು
ದೇಶಕ್ಕಾಗಿ ರಾಜರೊಬ್ಬರು ಆರ್ಭಟಿಸಿದ
ದಿನವಿಂದು
ಮರೆತು ಬಿಟ್ಟೆವು ನಾವೆಲ್ಲ ನೆನಪಿಸಬೇಕು
ಈ ದಿನವನ್ನು.
ಅಷ್ಟದಿಕ್ಕುಗಳಲ್ಲೂ ಬಿಳಿಯನ ಬಂದೂಕಿನ
ಘರ್ಜನೆ
ಇತ್ತ ದೇಶವ ಕಾಪಾಡಲು ಹುಲಿಯೊಂದರ
ಘರ್ಜನೆ
ಶರಣಾದರು ಕೆಲವು ಅರಸರು
ಆಸೆಯಿತ್ತು ಬದುಬೇಕು
ಐಷಾರಾಮಿ
ಎದೆ ಗುಂದಲಿಲ್ಲ ಮೈಸೂರಿನ ಹುಲಿ
ಹೋರಾಟದ ಹಾದಿ ಹಿಡಿದ
ದೇಶಪ್ರೇಮಿ
ಕಾಪಾಡಬೇಕಿತ್ತು ಬಿಳಿಯನಿಂದ ತನ್ನ
ದೇಶವನ್ನು
ಅದಕ್ಕಾಗಿ ತ್ಯಾಗ ಮಾಡಿದ್ದು ತನ್ನ
ಮಕ್ಕಳನ್ನು
ಬ್ರಿಟೀಷ್ ಸಾಮ್ರಾಜ್ಯವೆ ಟಿಪ್ಪುವಿನಿಂದ
ನಿದ್ದೆಗೆಟ್ಟಿತ್ತು
ಮೈಸೂರಿನ ಕತೆಯನ್ನು ಬಿಳಿಯನಿಗೆ
ಮುಗಿಸಬೇಕಿತ್ತು
ಅದಾಕ್ಕಾಗಿ ಕೆಲವು ದೇಶ ದ್ರೋಹಿಗಳು
ಸಿದ್ದವಿತ್ತು
ಅದೊಂದು ಯುದ್ದದ ರಣಕಹಳೆ
ಊದಲ್ಪಟ್ಟಿತು
ಎತ್ತನೋಡಿದರತ್ತ ಬ್ರೀಟೀಷ್ ಸೇನೆಗಳೆ
ಕಾಣುತ್ತಿತ್ತು
ಎದೆಗುಂದದೆ ಮೈಸೂರಿನ ಸೇನೆ
ಹೋರಾಟಕ್ಕಿಳಿಯಿತು
ಶಸ್ತ್ರ ಸಜ್ಜಿತ ಬ್ರೀಟೀಷರ ಎದೆಯೂ
ನಡುಗಲಾರಂಬಿಸಿತು
ಯಾಕಂದರೆ ಹುಲಿಯೊಂದು ರಣರಂಗದಲಿ
ಘರ್ಜಿಸುತ್ತಿತ್ತು
ಕ್ಷಣಮಾತ್ರದಲ್ಲಿ ರಣರಂಗ ರಕ್ತದ
ಹೊಳೆಯಾಯಿತು
ಬಿಳಿಯನ ಮೋಸದ ಬಾಣವೊಂದು
ಹುಲಿಯ ದೇಶ ಪ್ರೇಮದ ಘರ್ಜನೆಗೆ
ನಾಂದಿ ಹಾಡಿತು.
ಶಹೀದೆ ಮಿಲ್ಲತ್ ಟಿಪ್ಪು ಸುಲ್ತಾನ್(ರ.ಅ) ಮರಣವು ದೇಶಪ್ರೇಮಕ್ಕೆ ಸಾಕ್ಷಿಯಾಯಿತು.
ಮ.ಅಲಿ
- ma.ali
09 May 2015, 09:54 pm
Download App from Playstore: