ನ್ಯಾಯ ವಂಚಿತ ಸಹೋದರಿ
ಕ್ಷಮಿಸಿ ಸಹೋದರಿಯರೆ
ಹೇಳವ್ವ ತಂಗಿ ಸೌಜನ್ಯ
ಅದೆಷ್ಟು ನೋವ ಸಹಿಸಿರುವೆ
ಆ ಕ್ರೂರಿ ಪಾಪಿಗಳಿಂದ.
ಸ್ವಲ್ಪ ಗೋರಿಯ ಮೇಲೆದ್ದು
ನೋಡುವೆಯ ತಂಗಿ
ಸುತ್ತುತ್ತಿರುವರು ರಾಜ ಬೀದಿಯಲಿ
ನಿನ್ನ ಕೊಂದ ಪಾಪಿಗಳು
ನಾನೇನು ಮಾಡಲಿ ತಂಗಿ
ನ್ಯಾಯಲಯವನ್ನು ಗುತ್ತಿಗೆ
ಕೊಟ್ಟಿದೆ ನಮ್ಮ ಸರಕಾರಗಳು
ನಿನ್ನ ಕಥೆಯ ಹ್ಯಾಗ್ ಹೇಳಲಿ
ತಂಗಿ ನಿರ್ಭಯ
ನಿನ್ನ ಹಿಂಷಿಸಿದವನಿಗೆ ಇಲ್ಲವೆ ಇಲ್ಲ
ಒಂಚೂರು ಭಯ
ಕೋಪಿಸಬೇಡ ನಾನು ಹಿಡಿದಿರುವೆನು
ಪಲಕಗಳ ನ್ಯಾಯ ಬೇಕೆಂದು ತಂಗಿ
ನಿರ್ಭಯ
ನ್ಯಾಯವ ಪಡೆದಿರುವರು ನೀಡಿ ಕೇವಲ
ಹಣವ
ನಾನೇನು ಮಾಡಲಿ ಹಣವಿಲ್ಲ ನಾನೊಬ್ಬ
ಬಡವ
ಬಿಡಲಾರೆನು ಎಬ್ಬಿಸಿವೆನು ಎಲ್ಲರನು
ಅಕ್ಷರಗಳಲ್ಲಿ ನಿಮಗಾಗಿ
ಈ ತಲೆಯು ಪದಗಳ ಮರೆಯುವವರೆಗು
ಬರೆಯುವೆನು ನಿಮಗಾಗಿ
ಮ.ಅಲಿ
- ma.ali
09 May 2015, 09:50 pm
Download App from Playstore: