ಪ್ರವಾಸಿ

ಮನೆಯಲ್ಲಿ ತಂಗಿಯ ಮದುವೆ
ಮಾತು ಸುರುವಾಯಿತು..
ವರದಕ್ಷಿಣೆಯ ಬೇಡಿಕೆಯು
ಅದರಲ್ಲಿತ್ತು
ಅದಾಗಲೆ ಬಡಜೀವವು
ವಿಮಾನವೇರಿತ್ತು
ಕಣ್ಣೀರು ತುಳುಕುತ್ತಿತ್ತು
ಹೆತ್ತವ್ವಳ ನೆನಪಾಗುತ್ತಿತ್ತು..

ಮರುಭೂಮಿಯ ನಡುವೆ
ವಿಮಾನವು ಇಳಿಯುತ್ತಿತ್ತು
ಪಟ್ಟಣವೊಂದು ಶ್ರಂಗಾರಗೊಂಡು
ನ್ರತ್ಯವಾಡುತ್ತಿತ್ತು
ಇದು ಕಂಡ ಮನವು ಸ್ವಲ್ಪ
ಸಮಾದಾನಗೊಂಡಿತು

ಮರುಭೂಮಿಯು ಚಳಿಯಿಂದ
ನಡುಗುತ್ತಿತ್ತು
ಸುಡು ಬಿಸಿಲು ಬೆವರ ನದಿಯಾಗಿ
ಪರಿವರ್ತಿಸಿತು
ಇದೆಲ್ಲವು ಕಷ್ಟವಲ್ಲವೆಂದು
ನನಗನಿಸುತ್ತಿತ್ತು
ಯಾಕಂದರೆ ಹೆತ್ತವ್ವ ಹಣೆಗಿಟ್ಟ
ಮುತ್ತಲ್ಲಿ ಪ್ರಾರ್ಥನೆಯಿತ್ತು.

ಮ.ಅಲಿ

- ma.ali

09 May 2015, 09:48 pm
Download App from Playstore: