ಪ್ರಿಯತಮೆ
ಒಂದಿಷ್ಟು ಬೆಲೆಯಿಲ್ಲವೆ
ನಿನ್ನ ಹ್ರದಯದಲಿ
ಈ ಬಡಪಾಯಿಯ
ಪ್ರೀತಿಗೆ
ಕ್ಷಮೆ ಕೊಡು ನಿನ್ನ ವರಿಸಲು
ಹಣಕ್ಕಾಗಿ ವಿಮಾನ ಹತ್ತಿದ
ಪ್ರವಾಸಿಗೆ
ಯಾವ ಹಣದಾಸೆಯು ನಿನ್ನ
ಕರೆದೊಯ್ಯುತ್ತಿದೆ ಇನ್ನೊಂದು
ಗೂಡಿಗೆ
ಮೋಸವ ಮಾಡುತ್ತಿರುವೆ
ನಾ ಕೊಟ್ಟ ಸಮುದ್ರದಷ್ಟು
ಪ್ರೀತಿಗೆ
ಕೋಪದೊಳು ಸುಡುತ್ತಿದ್ದ ದೇಹಕ್ಕೆ
ನಯನಗಳು ಕಣ್ಣೀರ ಹರಿಸಿ
ತಂಪೆರಗಿವೆ
ನಿನ್ನ ಪ್ರೀತಿಯ ಬರೆಯುತ್ತಿದ್ದ
ಲೇಖನಿಯು ಶಾಯಿಯ ಚೆಲ್ಲಿ
ಮೌನವಾಗಿವೆ
ದೂರಿಟ್ಟಿರುವೆನು ಚಂದಾಮಾಮನಲಿ
ಮೋಸ ಮಾಡಿರುವೆ ನೀ ಪ್ರೀತಿಯಲಿ
ನ್ಯಾಯ ಕೊಡಲು ಚಂದಮಾಮನು
ಕೇಳುವನು ಸಾಕ್ಷಿಯಲಿ
ಅಸೂಯೆ ಆ ಕರಿಮೋಡಗಳಿಗೆ
ಅಡ್ಡ ನಿಂತಿವೆ ನಕ್ಷತ್ರಗಳಿಗೆ
ಬಾನಿನಲಿ
ಮ.ಅಲಿ
- ma.ali
09 May 2015, 09:44 pm
Download App from Playstore: