ಬೊಂಬಾಟ್ ಸುಂದ್ರಿ

ಬೊಂಬಾಟ್ ಸುಂದರಿ ಬೀದೀಲ್ ಬಂದ್ಳು
ಬಾಯ್ ಬಾಯ್ ಬಿಟ್ರು ಪಡ್ಡೆ ಹೈಕಳ್ಳು

ತಲೆ ಬಾಚ್ಕೊಂಡ್ ಕಾಲರ್ ಎತ್ಕೊಂಡು ಸುಂದ್ರ ಒಬ್ಬ ಹತ್ರ ಬಂದ
ಮೀಸೆಮ್ಯಾಲೆ ಕೈಯನ್ನಿಟ್ಟು
ಸುಂದ್ರಿ ಸೊಂಟ ನೋಡ್ತಾ ನಿಂತ

ಮೂಗು ಮೂತಿ ತಿರ್ಗುಸ್ಕೊಂಡು
ಠಸ್ಸು ಪುಸ್ಸು ಮಾತಾಡ್ಕೊಂಡು
ಮಾವನ್ ಮನೆಯ ದಾರಿ ಕೇಳಿ ಮಾವನ್ ಮಗನ ತೋರ್ಸಿ ಅಂದ್ಳು

ದೇವರ್ಪಾದ ಸೇರ್ಕೊಂಡ್ಮಾವ ಮೂರ್ತಿಂಗ್ಳ್ಹಿಂದೆ ಮಾಯ್ವಾಗೋದ
ಮಾವನ್ಮಗ ನಾನೆ ಈವ್ನಿ ಪ್ರಾಣ ಬೇಕಾರ್ಕೊಡ್ತೀನ್ನಿಂಗೆ ಏನ್ಬೇಕ್ಹೇಳು ಕೊಡ್ತೀನೆಂದ

ಲಕ್ಷ ಲಕ್ಷ ಸಾಲ ತಗೊಂಡ್ ಮುಂಡಾಮೋಚ್ಕೊಂಡ್ ಮಾಯ್ವಾಗವ್ನೆ
ಮುಂದಿನ್ತಿಂಗ್ಳು ಮದ್ವೆ ನನ್ದು ನನ್ದುಡ್ಡ್ ನನ್ಗೆ ವಾಪಸ್ಕೊಡು

ಬೆಪ್ ನನ್ಮಗ್ನಂಗ್ ಸಪ್ಗಾಗಾಗ್ಬಿಟ್ಟ ಸುಂದ್ರಿ ಮುಂದೆ ಮಾತ್ಬರ್ದಂಗೆ ತಬ್ಬಿಬ್ಬಾಗಿ ಕಣ್ ಕಣ್ ಬಿಟ್ಟ

..........ಮಧುಗಿರಿ ಬದರಿ

- K.Badarinatha

07 May 2015, 07:45 am
Download App from Playstore: