ಪ್ರೀತಿ ಭಾವನೆ

ಅಂತರಂಗದಲಿ ಅವಿತು
ಭಾವಾಂತರಂಗಗಳ ಬಡಿದೆಬ್ಬಿಸಿದೆ ಏಕೆ?

ಭಾವನೆಗಳೇ ಕಣ್ಣೀರಾಗಿ
ಮನಸ್ಸಾಗರದ ತೀರಕೆ
ಬಂದು ಮತ್ತೆ ಮತ್ತೆ ಹಿಂತಿರುಗುವಿರೇಕೆ?

ಪ್ರೀತಿ ಪ್ರತಿ ಅಲೆಯು
ನಿನ್ನ ಹುಡುಕಾಡಿ
ಅತ್ತಿತ್ತ ಅಲೆದಾಡಿ
ನೀ ಕಾಣದೆ ಸಪ್ಪಗೆ
ಸಾಗರದೊಳಗೆ ಸೇರಿದೆ

ನೀ ಬರುವ ದಾರಿ ಕಾಣಲು
ತೀರದ ತೆಂಗು ತಲೆ ಎತ್ತಿ ನೋಡಲು
ಸುಳಿವು ಸಿಗದೆ ಗರಿಗಳು ತಲೆ ತಗ್ಗಿಸಿದೆ

ಜಗಳವಾಡಿಲ್ಲ ಮುನಿಸಿಕೊಂಡಿಲ್ಲ
ಸುಮ್ಮನೆ ತವರಿಗೆ ಹೋದರೆ ಹೀಗೆ ನಾ ಸಹಿಸಲಿ ಹೇಗೆ

.....ಮಧುಗಿರಿ ಬದರಿ

- K.Badarinatha

03 May 2015, 02:06 am
Download App from Playstore: