ನನ್ನವಳು...

ನನ್ನವಳು ಒಮ್ಮೆ ಅಳುವಳು
ಮತ್ತೊಮ್ಮೆ ನಗುವವಳು
ಶ್ರೀಮಂತಿಕೆಯ ಸೊಗು ಹೊಂದದೆ
ಹೃದಯ ಶ್ರೀಮಂತಿಕೆ ಹೊದ್ದವಳು.

ದಿನವಿಡಿ ನನಗಾಗಿ ಕಾಯ್ದವಳು
ಮುಸುಕಿನಲ್ಲೂ ನನ್ನನ್ನು ಮರೆಯದವಳು
ಕಂಡಾಗ ನಾನು ಕೆನ್ನೆ ಕೆಂಪಾಗಿಸಿ
ನನ್ನ ಹೆಜ್ಜೆಯನ್ನೆ ಹಿಂಬಾಲಿಸಿದವಳು.

ಸೊಂಪಾದ ಕೂದಲನು ಚಂದಾದಿ ಹದಮಾಡಿ
ನನಗಾಗಿ ಹೊಸ ಜಡೆಯನು ಹಾಕಿದವಳು
ತಾನುಡುವ ಸೀರೆಯ ಬಣ್ಣವನು ನನಕೇಳಿ
ನನಗಾಗಿ ಹೊಸ ಸೀರೆಯಾ ತೊಟ್ಟವಳು.

ಕಷ್ಟಾದಿ ನನ್ನಿ ಮನ ಮರುಗಿದಾಗ
ಹದಮಾಡಿ,ನಿಜನುಡಿದು ತಿಳಿಹೆಳಿದವಳು
ಕರುಣೆ, ಕ್ಷಮತೆ ಹೊಂದಿದವಳು,ಶಾಂತಿಪ್ರಿಯಳು
ನನಗಾಗೆ ಕಾದವಳು ನನ್ನವಳು ಇವಳು ನನ್ನವಳು...
DS

- Dharmu.s.m

23 Apr 2015, 03:18 pm
Download App from Playstore: