ಹಳತು

ಹಳತು ಬೇಡವೆಂಬ ಭಾವ
ಎಲ್ಲವೂ ಹೊಸತೆನಿಸುವ
ಅಹಂಭಾವ
ಹಳೆಯ ಎಲ್ಲವನ್ನೂ
ಗೋಣಿಯೊಂದರಲ್ಲಿ
ತುರುಕಿಸಿತು
ರಾತ್ರಿ ಮಳೆಯೋ ಮಳೆ
ಕರೆಂಟು ಕೈಗೊಟ್ಟಿತು
ಹಾಳಾದ ಬ್ಯಾಟರಿಯು
ಖಾಲಿ
ಬರಿಯ ಕತ್ತಲು
ಇನ್ನೇನೆಂದು
ಯೋಚಿಸಿ ಕುಳಿತಾಗ
ಗೋಣಿಯೊಳಗೆ ತುರುಕಿದ
ಹಳೆಯ ಲ್ಯಾಂಪಿನ
ನೆನಪಾಯಿತು
ಹಾಗೇ
ಹಳತು
ಮನವ, ಇರುಳ ಎರಡನ್ನೂ
ಬೆಳಗಿತು

ಮುಹಮ್ಮದ್ ಇಸ್ಹಾಕ್
ಕೌಸರಿ

- ishak

23 Apr 2015, 07:48 am
Download App from Playstore: