ಜೈ ಭಾರತ
ಯಾವ ದೇಶದಲ್ಲಿ
ಅಂಬುಲೆನ್ಸ್ ಬರುವ ಮುನ್ನ
ಪಿಜ್ಜ ಮನೆಗೆ ತಲುಪಿರುತ್ತದೋ
ಯಾವ ದೇಶದಲ್ಲಿ
ದೇವತೆಗಳ ಪೂಜಿಸಿದರೂ
ಹೆಣ್ಣಿಗೆ ರಕ್ಷಣೆ ಇಲ್ಲವೋ
ಯಾವ ದೇಶದಲ್ಲಿ
ಚಪ್ಪಲಿಯನು ಎಸಿ ರೂಮಲ್ಲಿಟ್ಟು
ತರಕಾರಿಯನು ರಸ್ತೆ ಬದಿಯಲಿ ಮಾರುತ್ತೇವೋ
ಯಾವ ದೇಶದಲಿ
ಬ್ಯಾಟನಿಡಿದು ಚೆಂಡನೊಡೆಯವಗೆ ಕೋಟಿ ಕೊಟ್ಟು
ಗನ್ನನಿಡಿದು ದೇಶ ಕಾಯುವವನ ನೋಯಿಸುತ್ತೆವೆಯೋ
ಯಾವ ದೇಶದಲಿ
ಹಾಲು ಮೊಸರನು ಕುಡಿದು
ಬೆಣ್ಣೆ ತುಪ್ಪ ವನು ತಿಂದು
ಕೊನೆಗೆ ಅವಳನೆ ಕೊಂದು ತಿನ್ನುತ್ತೆವೆಯೋ
ಯಾವ ದೇಶದಲಿ
ಭಿಕ್ಷೆ ಪಡೆದು ಓಟನು ಒತ್ತಿ
ಗುಲಾಮರಂತೆ ಬದುಕುತ್ತಿದ್ದೆವೆಯೋ
ಆ ದೇಶವೇ ನನ್ನದು
ಜೈ ಭಾರಂತಾಬೆ....
- ಚೇತನ್ ಬಿ ಸಿ
22 Apr 2015, 01:45 am
Download App from Playstore: