ನನ್ನವಳು
ಹೇಳದ ಮಾತು ನನ್ನೊಳಗೆ ಉಳಿದಿರಲು
ಕಾಣದೇ ಹೋದಳು ನನ್ನವಳು ಇಂದು
ಶಿವನ ಮುಂದೆ ಓಂಕಾರದ ನಾದ
ನನ್ನವಳ ಮುಂದೆ ಪ್ರೇಮಂಕುರದ ಬಾವ
ಬಾನಂಗಳದಿ ಚಂದಿರನು ಹೊಳೆದಿರಲು
ನನ್ನೆದೆಯ ಅಂಗಳದಲಿ ನನ್ನವಳ ನಗುವಿರಲು
ಕಾಲ್ಗೆಜ್ಜೆಯ ನಿನಾದ ನನ್ನನು ಕಾಡಿರಲು
ಬಾರದೆ ಹೋದಳು ನನ್ನವಳು ಇಂದು
:- ಸಂತೋಷ್
- santhosh
21 Apr 2015, 04:24 pm
Download App from Playstore: