ರಾಧಾ ಪ್ರಲಾಪ :
ಕಾದು ಕಾದು ಹಾದಿ ಕೊರಗಿದೆ
ಹೊತ್ತು ಹೋಗದೆ ಸಮಯ ಸೊರಗಿದೆ
ನೀ ಬಾರದೆ ಮನ ನೊಂದು ಬಳಲಿದೆ
ಕ್ರಿಷ್ಣಾ.......
ನಾಟ್ಯ ಮಯೂರಿ ಗರಿ ಮುಚ್ಚಿ ಮಲಗಿದೆ
ಗಾನ ಕೋಗಿಲೆಯ ಗಂಟಲು ಉಬ್ಬಿದೆ
ಚಂದಿರನ ಕಾದ ಚಕೋರಿಯಂತೆ
ಬ್ರುಂದಾವನದ ಬಾಗಿಲಿಗೆ ತಲೆಯಿಟ್ಡು ಮಲಗಿರುವೆ
ಶ್ಯಾಮ ನೀ ಬೇಗ ಬರಬಾರದೆ
ಕಾದು ಕಾದು ಹಾದಿ ಕೊರಗಿದೆ ಕ್ರಿಷ್ಣಾ.....
ಸಪ್ತ ಸಾಗರಗಳು ಸುಪ್ತವಾದಂತೆ
ಪಂಚಭೂತಗಳು ಗುಪ್ತವಾದಂತೆ
ಪಂಚೇಂದ್ರಿಯಗಳು ನಿರ್ಲಿಪ್ತವಾದಂತೆ
ಸಂಯಮ ಮೀರಿದೆ ಸಂತೋಷ ಕಾಣದೆ
ಗೋಪಾಲ ನೀ ಬೇಗ ಬರಬಾರದೆ
ಕಾದು ಕಾದು ಹಾದಿ ಕೊರಗಿದೆ ಕ್ರಿಷ್ಣಾ.....
.........ಮಧುಗಿರಿ ಬದರಿ
- K.Badarinatha
17 Apr 2015, 04:32 am
Download App from Playstore: