ಇಬ್ಬರೂ ನೀರಾದ ಬಗೆ
ನೆರೆ ಬಂದ ಕಾಲಕ್ಕೆ ನೀರ ತರಲು ಹೋದ ನೀರೆ ಬಾರದಿರೆ
ನೊಂದು ಬೆಂದು ಬಳಲಿ ಬಿಸಿಲಿಗೆ ಹಿಮ ಕರಗಿ ನೀರಿನಂತಾದ ನಲ್ಲ
ನೆರೆ ನಿಂತು ಪರರ ನೆರೆವಿನಲಿ ತನ್ನ ಮನದ ಅರಮನೆಯ ದೊರೆಯ ಬೆರೆಯಲು ಓಡೋಡಿ ಬಂದು
ದೊರೆಯ ಕರ ಪಿಡಿಯೆ ನಾಚಿ ನೀರಾದಾಳು ನಲ್ಲೆ
.........ಮಧುಗಿರಿ ಬದರಿ
- K.Badarinatha
11 Apr 2015, 02:05 pm
Download App from Playstore: