ಅವಳು ನನಗೆ ಬರೆದ ಕವನ
ಈ ದಿನ ನನಗ ವಿ಼ಶೇಷವಾದ ದಿನ
ನಾಳೆ ಏನೆಂಬುದು ಗೊತ್ತಿಲ್ಲ.
ಈ ದಿನ ನೀ ನನ್ನೊಡನಿರುವೆ
ನಾಳೆ ನೀ ನನ್ನೊಡನಿರದಿರಬಹುದು.
ಹಲವು ಬಾರಿ ನೀ ನನ್ನೊಡನಿದ್ದು
ನನ್ನ ಬದುಕಿನ ಸಂಪತ್ತು ಹೆಚ್ಚಿತು.
ನಾನು ಶ್ರೀಮಂತಳಾದೆ
ಬದುಕಿನ ಅರ್ಥ ನಿನ್ನಿಂದ ತಿಳಿದೆ.
ಮಾತನಾಡುತ್ತಾ ನಾವು ನಮ್ಮನ್ನ ಮರೆತೆವು
ನಮ್ಮ ಸುತ್ತಲು ಹೊಸ ಜಗತ್ತು ಕಟ್ಟಿದೆವು.
ನೀನಾಡಿದ ಮಾತುಗಳು ಈಗಲೂ ಕೇಳುತ್ತಿವೆ
ಮತ್ತು ಅವುಗಳನ್ನು ಕೊನೆಯವರೆಗೂ ಮರೆಯುವುದಿಲ್ಲ.
ಕನಸುಗಳನ್ನು ಹಂಚಿಕೊಂಡೆವು
ನಮ್ಮ ಮುಂದಿನ ಜೀವನವನು ಕಂಡೆವು.
ಹೊಸ ಹಾಡನ್ನು ಹಾಡುತ್ತ
ನಮ್ಮ ನಮ್ಮ ನೋವುಗಳನು ಮರೆತೆವು.
ಹಾಡು ಹಾಡುತ್ತಿರುವಾಗಲೇ
ಅಯ್ಯೋ ಹಾಡಿನ ಶೃತಿ ಹಾಳಾಯಿತು.
ಕಣ್ಣೊಳಗಿದ್ದ ಕನಸುಗಳೆಲ್ಲವು
ಅಯ್ಯೋ ನೆನಪು ಬಾರದೆ ನಾಶವಾದವು.
ನಾಳೆ ಎನ್ನುವುದರಲ್ಲಿ ಎಲ್ಲವು ಅಡಗಿರುವುದು.
ಇಂದಿನಂತಿಲ್ಲದಿದ್ದರು ನಾಳೆ
ಜೀವನ ಸಾಗುವುದು ಕೊನೆಯವರೆಗೆ.
ಆದರೆ....
ಕಣ್ಗಳಿಂದ ಹರಿಯುವ ನೀರಿಗೆ ಕೊನೆಯಿಲ್ಲ.
ಚೇತನ್ ಬಿ ಸಿ
- ಚೇತನ್ ಬಿ ಸಿ
10 Apr 2015, 05:17 pm
Download App from Playstore: