ನಾ ದಾಸನು ಅವನಿಗೆ

ನಾ ದಾಸನು ಅವನಿಗೆ
ಆ ದೇವರ ಒಲುಮೆಗೆ
ನಾ ಸೇವಕನು ಅವನಿಗೆ
ಆ ಪುರುಷೋತ್ತಮನಿಗೆ
ಸದಾ ಕಾಯುವ
ಭಕ್ತೋದ್ದಾರಕನಿಗೆ

ಪ್ರತಿಯೊಂದು ಅವನದೆ
ಅವನಿಲ್ಲದೆ ಎನೂ ಇಲ್ಲ
ಅವನನು ಮರೆತರೆ
ಶೂನ್ಯವೆ ಎಲ್ಲಾ
ಸಾಕ್ಷಿಯು ಅವನೆ
ನಿರ್ವಿಕಲ್ಪನು ಅವನೆ
ಎಲ್ಲಾ ಬಲ್ಲ ಸರಸಿಜಾಕ್ಷನು
ಅವನೆ ಸರ್ವೋತ್ತಮನು
ಅವನೆ ಆ ದೈವೋತ್ತಮನೆ.

ಅವನ ದಾಸನಾದರೆ
ನಾ ಅವನ ಸೇವಕನಾದಾಗಲೆ
ಬದುಕು ಧನ್ಯ.

- shashishekar ng

10 Apr 2015, 01:27 am
Download App from Playstore: