ದುಂಬಿ
ನಿನ್ನ ಕಣ್ಣ ಕೋಲ್ಮಿಂಚು ಮಿಂಚುಳ್ಳಿಯಾಗಿ ನನ್ನಲ್ಲಿ ಪ್ರೀತಿಯ ಕಿಚ್ಚು ಹಚ್ಚಿ ಹುಚ್ಚೆಬ್ಬಿಸಿದೆ
ಹುಚ್ಚು ಹೆಚ್ಚಾಗಿ ಪ್ರೀತಿ ಎಳೆ ಎಳೆಯಾಗಿ ನೂಲಿನಂತೆ ನನ್ನ ಸುತ್ತಿದೆ
ನಾ ದುಂಬಿಯಂತಾಗಿ ವಿರಹ ತಾಪಕ್ಕೆ ಸುಡುವ ಮುನ್ನ ಬೇಗನೆ ಒಪ್ಪಿ ನಗೆಹನಿಯ ಸಿಂಪಡಿಸು
ನಿನ್ನ ನಗು ಮೋಡಿ ಮಾಡಿ ದುಂಬಿಯಂತಿರುವ ನನ್ನ ಹಾರುವ ಹಕ್ಕಿಯಾಗಿಸಬಲ್ಲದು
- K.Badarinatha
06 Apr 2015, 01:56 am
Download App from Playstore: