ಕವಿತೆ ವ್ಯಥೆ

ದೊಡ್ಡ ದೊಡ್ಡ ಕವಿಗಳನ್ನು ನೋಡಿ ಕವಿತೆ ಬರೆಯಬೇಕೆನಿಸಿತು

ದೊಡ್ಡ ದೊಡ್ಡ ಕವಿಗಳನ್ನು ನೋಡಿ ಕವಿತೆ ಬರೆಯಬೇಕೆನಿಸಿತು

ತಪ್ಪೇನಿಲ್ಲ

ಅವರಂತೆ ಕೋಟು ನಿಲುವಂಗಿ ಧರಿಸಿದೆ
ಕವಿತೆ ಬರಲಿಲ್ಲ

ಅರೆ ಅವರು ಚಷ್ಮಾ ಧಾರಿಗಳು ನನಗಿಲ್ಲವಲ್ಲಾ ಎಂದು ಚಷ್ಮ ಧರಿಸಿದೆ
ಕವಿತೆ ಬರಲಿಲ್ಲ

ಛೆ ಅವರೆಲ್ಲಾ ಗಡ್ಡಧಾರಿಗಳು ಎಂದು ಕ್ಷೌರ ಮಾಡುವುದ ಬಿಟ್ಟೆ
ಕವಿತೆ ಬರಲಿಲ್ಲ

ನನ್ನ ವ್ಯಥೆ ನೋಡಿ ನನ್ನಾಕೆ ಎಂದಳು ರೀ ನಿಮ್ಮ ತಲೆಯೆಂಬ ಮೊಬೈಲ್ನಲ್ಲಿ ಸಿಮಕಾರ್ಡೆ ಇಲ್ಲ

ಇರುವುದೆಲ್ಲ ಬರಿ ಮಂಡ್ಯದ ಮುದ್ದೆ ಬೆಲ್ಲ

...........ಮಧುಗಿರಿ ಬದರಿ

- K.Badarinatha

31 Mar 2015, 09:53 am
Download App from Playstore: