ನೀವೆಂತಾ ಅದೃಷ್ಟವಂತರು

ನನ್ನ ಕವನದ ಹಾವಳಿ ನಿಮ್ಮ ಕಿವಿಗಳಿಗಿಲ್ಲ
ನಾ ಬರೆದ ಕವನಗಳ ಯಾರೂ ಹಾಡುವುದಿಲ್ಲ
ಕರ್ಣ ಕಠೊರವಾಗಿ ಉಚ್ಚರಿಸುವುದಿಲ್ಲ
ಗೊಣಗುವಂತೆ ಯಾರೂ ಗುನುಗುಟ್ಟುವುದಿಲ್ಲ
ಏಕೆಂದರೆ ಮನಕ್ಕೆ ನಾಟುವಂತೆ ನಾ ಬರೆಯುವುದಿಲ್ಲ

ಒಮ್ಮೆ ಓದಿದರೆ ಮತ್ತೊಮ್ಮೆ ಕಣ್ಣು ಹಾಯಿಸುವ
ತವಕ ತರುವುದಿಲ್ಲ
ಮಗದೊಮ್ಮೆ ಓದುವ ಸಂಕಷ್ಟ ನಿಮಗಿಲ್ಲ
ಮರೆತು ಹೋಯಿತೆಂಬ ನೋವ ನಾ ಕೊಡುವುದಿಲ್ಲ
ಏಕೆಂದರೆ ನೆನಪಲ್ಲುಳಿವ ಕವನ ನಾ ಬರೆಯುವುದೇ ಇಲ್ಲ

ಬದುಕಿನ ನೂರು ನೋವ ಅರುಹಿ ತಲ್ಲಣಗೊಳಿಸುವುದಿಲ್ಲ
ಪ್ರೇಮ ಪುರಾಣ ಕೊರೆದು ನಿಮ್ಮ ತಲೆ ತಿನ್ನುವುದಿಲ್ಲ
ಸುಖದ ಸುಪ್ಪತ್ತಿಗೆಯ ಸವಿಗನಸ ಬಿತ್ತುವುದಿಲ್ಲ
ಕಾಮ ಕ್ರೋಧದ ಗಂದ ಗಾಳಿಯ ಕವನಗಳಿಲ್ಲ
ಏಕೆಂದರೆ ನನಗಾವ ಭಾವನೆಗಳೂ ಇಲ್ಲ.

- ಶ್ರೀಗೋ.

27 Oct 2014, 01:06 pm
Download App from Playstore: