ನಾ ಮತ್ತೆ ಕವಿಯಾದೆ
ಹೊಂಗಿರಣ ಮೂಡಿರಲು ಆಗಸದಲ್ಲಿ,
ಅರಳಿತು ಇಂಪಾದ ರಾಗ ಮನದಲ್ಲಿ.
...ಸವಿಯಲು, ನಾ ಮತ್ತೆ ಕವಿಯಾದೆ.
ಮನವು ಹೇಳಿತು,
"ಜೇನಿನ ದನಿಯನ್ನೊಮ್ಮೆ ಕೇಳು, ಯಾವ ನಾದವಿದೆ ಅದರಲ್ಲಿ ನೀ ಹೇಳು".
.....ಕೇಳಲು, ನಾ ಮತ್ತೆ ಕವಿಯಾದೆ.
ಮೌನದ ಮುಖದಲ್ಲು ಮಾತೊಂದು ಕೇಳಿಸಿತು,
ನಾ ಮತ್ತೆ ನಗಬೇಕೆಂದು ಅದು ಹೇಳಿತು.
......ನಗಿಸಲು, ನಾ ಮತ್ತೆ ಕವಿಯಾದೆ.
ಬಂಧಿಸಿದ್ದ ನೂರಾರು ಮತುಗಳು ಮುಕ್ತವಾಗಿ ಹೊರ ಬರಲು,
ಮತ್ತೆ ಜಗವನ್ನು ನನ್ನಿಂದ ಕಾಣಲು.
......ಪರಿವರ್ತನೆಯಾಗಲು, ನಾ ಮತ್ತೆ ಕವಿಯಾದೆ....!!!!!
- ವಸಂತ್ ಕುಮಾರ್
25 Mar 2015, 03:15 pm
Download App from Playstore: