ನಮ್ಮವನು

ನೇಸರಿನ ಬೆಳಕಿನ ಬೆಳಕಿಗಿಲ್ಲ ಕಪಟ
ನಿತ್ಯದಿನ ನಿಡಿ ಬೆಳಕು ಹರಸುತಿಹನು
ಹೆಮ್ಮರವು ಸೂಸುವ ಗಾಳಿಗಿಲ್ಲ ಯಾವ ಮೊನಚು
ಉಸಿರ ನಿಡಿ,ಹಸಿರ ಹೊದೊಸಿ ಸುಕವ ನಿಡುವನು.

ಹರಿವ ತೊರೆಗೆ, ಬಿದ್ದ ಮಳೆಗೆ ಇಲ್ಲ ಅಹಃ
ಪ್ರಾಣ ದಾಹವ ತೀರಿ ಜೀವ ಉಳಿಸಿತು.
ಅರಳು ಪುಷ್ಪವು ಸೂಸಿ ಸುಗಂಧವ
ಬೆಡದದು ಎಂದು ತಕ್ಕ ಪ್ರತಿಪಲವನು.

ಕೊಟ್ಟ ಮಾತಿಗೆ, ಇಟ್ಟನಂಬಿಕೆಗೆ
ಎಲ್ಲಿಹುದು ಇಲ್ಲಿ ವಿಶ್ವಾಸ
ಮಂಕು ಬೂದಿಯ ಎರಚಿ,
ಸುಳ್ಳು ರಾಶಿಯನು ಗೆಡವಿ,
ತನ್ನ ಮನದ ಸಂತೃಪ್ತಿಗೆ
ಕರುಣೆ, ಕ್ಷಮತೆ ಹೊಂದದೆ,
ಪರರ ಮನವ ನೊಯಿಸಿ,
ಭವ್ಯ ಭಾವನೆಗಳನು ಗೂಡಿಸಿ,
ಕಾಲಚಕ್ರದಡಿಯಲಿ,ನೆಮ್ಮದಿ ಇರದ ಮಡುವಲಿ,
ಬದುಗ ಬಂಡಿ ಎಳೆವನು,
ಪರರರೆಂದು ನೊಡನು
ನಮ್ಮವನು, ಇವನು ಮಾನವನು.
ಇವನು ಮಾನವನು.

DS...

- Dharmu.s.m

16 Mar 2015, 02:44 am
Download App from Playstore: