ಒಂದಿಂಚು ಸಾಲು...

ಎಷ್ಟೋ ಭರವಸೆಗಳು
ಬಾಳುತ್ತಿರುವಾಗ
ಅನೇಕ ನಿರಾಶೆಗಳು
ಮುದುಡಿಕೊಂಡಿವೆ
ಹಿಂದಿನ ಸಾಲಿನಲ್ಲಿ

ಎಷ್ಟೋ ನಿರಾಶೆಗಳು
ಬಾಳುತ್ತಿರುವಾಗ
ಅನೇಕ ಭರವಸೆಗಳು
ಅಂತ್ಯಕಾಣಲೇತ್ನಿಸುತ್ತಿದೆ
ಸ್ಮಶಾಣದ ಬಾಗಿಲಲ್ಲಿ

ಎಷ್ಟೋ ಭರವಸೆಗಳು
ದೋಣಿಯಲ್ಲಿ ಸಾಗಿ
ಮಕರಂದ ಹೀರಿ
ತಣ್ಣನೆ ಗಾಳಿಯಲ್ಲಿ ತೇಲಿ
ಹಸಿರಿನ ಮೇಲೆ ಹೆಸರಾಗುತ್ತ,,,

ಎಷ್ಟೋ ನಿರಾಶೆಗಳು
ನೀರಲ್ಲಿ ಈಜುತ ಸಾಗಿ
ಹಗ್ಗದ ತುದಿಗೆ ಮುತ್ತನಿಕ್ಕಿ
ಗಾಳಿಯನ್ನು ಘಮಿಸದೆ
ಹಸಿರಿನ ಕೆಳಗೆ ಕರಗುತ್ತ,,,,

-ಈಶ, ಎಂ.ಸಿ.ಹಳ್ಳಿ

- ಈಶ, ಎಂ.ಸಿ.ಹಳ್ಳಿ

13 Mar 2015, 05:41 pm
Download App from Playstore: