ಪ್ರೀತಿ ಮತ್ತು ಎಣ್ಣೆ

ಈ ಪ್ರೀತಿ ಎಂಬುದೇ ಹೀಗೆ ಕಣ್ರೀ
ಮೊದ ಮೊದಲು ತುಂಬಾ ಖುಷಿ ಕೊಡುತ್ತೆ
ಹೊಟ್ಟೆಗೆ ಹೋದ ಎಣ್ಣೆ ತಲೆಗೆ ಕಿಕ್ಕು ಕೊಟ್ಟಂತೆ

ಬರಬರುತ್ತಾ ನಿದ್ರೆನೇ ಕೊಡಲ್ಲ
ನೆತ್ತಿಗೆ ಹಾಕಿದ ಎಣ್ಣೆ ಕಣ್ಣಿಗೆ ಬಿದ್ದಂತೆ

ಮನೆಯವರು ಒಪ್ಕೊಂಡಿಲ್ಲ ಅಂದ್ರೆ
ನಿಂತು ನಿಂತು ಸಾಗುತ್ತೆ
ಬೈಕಿನ ಟ್ಯಾಂಕಿಗೆ ಹಾಕಿದ ಎಣ್ಣೆ
ರಿಸರ್ವ್ ಗೆ ಬಿದ್ದಂತೆ

ಪ್ರೀತಿ ಕೈ ಕೊಡ್ತು ಅನ್ನಿ, ಮರೆಯಲಾಗೋದೇ ಇಲ್ಲ, ಇಂಜಿನ್ ಗೆ ಹಾಕಿದ ಎಣ್ಣೆ ಬಟ್ಟೆಗೆ
ಮೆತ್ತಿಕೊಂಡಂತೆ

ಅವಳನ್ನೇ ಮದುವೆ ಆದ್ರಿ ಅಂದ್ಕೊಳ್ಳಿ
ತಲೆಗೆ ಕೊಬ್ಬರಿ ಎಣ್ಣೆ ಹಾಕೋದು ಮರೆತು ಹೋಗುತ್ತೆ

- ಕೃಷ್ಣಮೂರ್ತಿ ಚಿತ್ರಶೆಟ್ಟಿಹಳ್ಳಿ

- ಕ್ರಷ್ಣಮೂರ್ತಿ ಚಿತ್ರಶೆಟ್ಟಿಹಳ್ಳಿ

09 Mar 2015, 05:32 pm
Download App from Playstore: