ಕೊರಳ ಸುತ್ತಿಗೆ...
ಕೊರಳ ಸುತ್ತಿಗೆ ...
ಕೊರಳಲ್ಲಿ ಸುತ್ತಿಕೊಂಡ
ಅದೆಷ್ಟು ದಾರಗಳು ಕಳಚಿದ್ದೇನೆ
ಈಗ ಮಾಲೆಯೊಂದಿದೆ
ಮನುಷ್ಯನಾದ ಮೇಲೆ.
ಹಿಂದಿನ ದಾರಗಳು
ರೂಪಾಂಕುರವಿತ್ತು
ಆದರೆ ಅವುಗಳು
ಗಂಟ್ಟಲು ಬಿಗಿವ ದಾರಗಳಾಗಿದ್ದವು.
ಒಂದೊಂದು ಸಹ
ಪಡೆಯುವಾಗ ಚಿನ್ನದಂತೆ
ಅಂದುಕೊಂಡೆ, ಕಾಲ ಕಳೆದಂತೆ
ಚಿನ್ನ ಹೊದ್ದ ಕಬ್ಬಿಣವಾಗಿತ್ತು.
ಕಬ್ಬಿಣವಾದರು ಪರವಾಗಿಲ್ಲ ಅನ್ನಿಸಿದಾಗ
ಮಸೆದ ಖಡ್ಗವಾಗಬೇಕೆ ?
ಕುತ್ತಿಗೆಗೆ ಸಂಚಕಾರ ಬಂದಾಗ
ಕೊಂಚವು ಅಂಜದೆ ಮಂಡ ಮಾಡಿದೆ.
ಇನ್ನು ನನ್ನ ಕಪಾಟ್ಟಿನಲ್ಲಿ ಒಂದಾಷ್ಟು ದಾರಗಳಿವೆ
ಜಾಗ್ರತೆಯಿಂದ ಖರೀದಿಸಿದ್ದು
ಜಾರುವ ಕುರವುಗಳಿಲ್ಲ..!
ಆದರೂ ಮಾಲೆಯಲ್ಲಿದ್ದೆನೆ ಮನಷ್ಯನಾದ ಮೇಲೆ.....
-ಈಶ, ಎಂ.ಸಿ.ಹಳ್ಳಿ
- ಈಶ, ಎಂ.ಸಿ.ಹಳ್ಳಿ
08 Mar 2015, 01:57 pm
Download App from Playstore: