ಮಾತೇ

ಮಾತೇ....

ಕತ್ತಲೆಯಲ್ಲಿದ್ದವರು
ಬೆಳಕ ಬೇಡಲು.
ಕಿರಣ ಬೀರಲು
ಕದವ ತೆರೆದಳು
ಕರುಣಮಾಯಿ ಅಮ್ಮ...

ಮಮತೆಯ ಮರೆತ
ಮನುಜನ ಕೊರೆತೆ
ಅಮೃತವೆಲ್ಲ ವಿಷವಾಗಿರಲು
ವಿಷಾದಾವೆಲ್ಲ ವಿದ್ಯೆಯಂತೆ
ಪ್ರೇಮವನ್ನಿತ್ತ ಅಮ್ಮ...

ಜಗದ ನಾಲಿಗೆ
ಕಹಿಯಾಗಿದೆ ಇಂದು
ರುಚಿಕಾಣದ ಮನಸ್ಸು
ರೋಚ್ಚಿನಲ್ಲಿದ್ದ ಕಣ್ಣುಗಳಿಗೆ
ಶಾಂತಿಸಿದಳೀ ಅಮ್ಮ...

ಬೇದಭಾವದ ಬದುಕಿನಲಿ
ಬೇಧಿಸಲಾಗದೀ ನಾಲಿಗೆಗೆ
ಬಂಧಿಯಾದ ಅತ್ಮಗಳಿಗೆ
ಭಾವೈಕತೆಯ ಸಮಸ್ಯೆಯನ್ನು
ಭಾವುಗಳಿಂದ ಬೇಸೆದಳೀ ಅಮ್ಮ...

ಲೋಕನಾಯಕಿ ಲೇಪದಲಿ
ಲೋಕಾಮೃತೆ ಪ್ರೀತಿಯಲಿ
ಗೋಮಾತೆ ತ್ಯಾಗದಲಿ
ಆನಂದಮಾಯಿ ಆರ್ದ್ರತೆಯಲಿ
ಅದೆಲ್ಲವು ಈ ಅಮ್ಮನಲಿ....

-ಈಶ, ಎಂ.ಸಿ.ಹಳ್ಳಿ

- ಈಶ, ಎಂ.ಸಿ.ಹಳ್ಳಿ

01 Mar 2015, 03:46 am
Download App from Playstore: