ಜಾತಿ

ನೂರೊಂದು ಭಾವನೆಗಳ ಹಂದರವು
ಹಾಸುಹೊಕ್ಕಾಗಿದೆ ಮನದಲಿ
ಕಲ್ಪನಾ ಲೋಕದಲಿ ಮಿಂದ್ದೆದ್ದು
ಆಸೇಗಳು ನರ್ತಿಸುತ್ತಿವೆ ಇಲ್ಲಿ..

ಹೊಲಸು ಮಾತುಗಳು
ಅಪ್ಪಳಿಸುತಿವೆ "ರಣವೇಗದಲಿ"
ಎದೆಯಗೊಡೆಗೆ.
ನನ್ನ ಹುಟ್ಟಿನ ಪಾಪಪ್ರಜ್ಣೆಯ ಸೂಚಿ
ಚಪ್ಪರಿಸಿ ಎಬ್ಬಿಸಿದೆ
ನಡುಮದ್ಯದ ನಡುನಿದ್ರೆಯಲಿ..

ಮನಸಿನಾಸೆಯ ವ್ಯಾಪ್ತಿ ಅಕಾಶದಗಲ
ವ್ಯಕ್ತಪಡಿಸುವ ಮಾರ್ಗ ಸಿಗದೆ
ಬಳಲಿದೆ,ತೊಳಲಿದೆo
ಆತ್ಮಸಂತೃಪ್ತಿಯೆಡೆಗೆ ಮನನಡೆದಿದೆ
ಜೀವನವೆ ಸಾಕಾಗಿದೆ ಎತಕಿ ಸಂತೃಪ್ತಿ ಅಲ್ಲವೆ...

- Dharmu.s.m

08 Feb 2015, 10:33 am
Download App from Playstore: