ಧರ್ಮ ಧರ್ಮವೆಂದು ಹೊಡೆದಾಡಿದೆ
ಧರ್ಮ ಧರ್ಮವೆಂದು ಹೊಡೆದಾಡಿದೆವು
ಧರ್ಮದ ಮರ್ಮವ ತಿಳಿಯದೆ ಹೋದೆವು
ಧರ್ಮ ಧರ್ಮವೆಂದು ಹೋರಾಡಿದೆವು
ಧರ್ಮದ ತತ್ವವ ಅನುಸರಿಸದೆ ಹೋದೆವು
ಧರ್ಮದ ನಾಮದಿ ನಾವೇ ತುರುಕಿದ ಸಿದ್ಧಾಂತದಿ
ಯಾರನ್ನೋ ಕೊಂದೆವು
ನೈಜ ಧರ್ಮದಿ ತತ್ವವು ಇಂದು
ಬರೀ ಗ್ರಂಥದಿ ಹುದುಗಿಹೋಗಿದೆ
ಹೆಸರ ದುರ್ಬಳಕೆಯ
ನೋಡಿ ಮೌನದಿ ರೋಧಿಸತೊಡಗಿದೆ
ಎಂ.ಐ.ಕೆ
- ishak
04 Feb 2015, 06:20 am
Download App from Playstore: