ನನ್ನ ನಗುಮೊಗವ ನೋಡಿ
ಅಮ್ಮಾ ಎಂದರ್ಥದ
ಸನ್ನೆಯ ಮನಗಂಡು
ಎದೆಗಪ್ಪಿದ ಬಿಗಿ ಅಪ್ಪುಗೆಯಿಂದ
ಮೆಲ್ಲನೆ ಬಿಡಿಸಿ
ನೀ ದೂರ ಹೋದೆಯಲ್ಲಾ
ಹೇಗೆ ಮನಸ್ಸು ಬಂತು ಹೇಳು
ಬಾಲ್ಯದ ನೆನಪು ನಿನಗಾಗಲಿಲ್ಲವೇ
ಮಾತೆಯ ಮಮತೆಯ
ಅನುಭವಿಸಿಲ್ಲವೇ ನೀ
ಕಾಮ ಎನ್ನುವ ಎರಡಕ್ಷರಕೆ
ಬಲಿಯಾದೆಯಾ ನೀ
ನನ್ನ ಬವಣೆಯ ಮರೆತು ನೀನೆಲ್ಲಿ ಸುಖಪಡುತಿರುವೆ
ಬದುಕು ಬರೆಯುವ ಆಸೆ ನಿನ್ನದು
ನನ್ನ ಕೊಂದು
ನಾ ಎಳೆಯ ಚಿಗುರು
ನೂರು ನೂರು ಕನಸು ಹೊತ್ತು
ಈ ಧರೆಗೆ ಬಂದವಳು
ನೀ ಕೇಳಲಿಲ್ಲ
ನನ್ನ ಆರ್ತನಾದದಲಿ
ನಿನ್ನ ಮೈ ಮಾರಾಟದಲಿ
ಅಮ್ಮಾ
ಎನ್ನುವ ಕೂಗಿನಲಿ
ಕರುಣಿದ ಕಾಮ ಪಿಶಾಚಿ
ನನ್ನಂತೆ ಮಗುವಾಗಿದ್ದ
ಪ್ರೀತಿಯ ಬೆಲೆ ಅರಿಯದ
ಕಠೋರ ಬಾಯಿಗೆ ತುತ್ತಾಗಿ
ನೀ ಬೆಂದು ಹೋದೆಯಲ್ಲಾ
ನನ್ನ ನಿನ್ನೊಂದಿಗೆ ಸೇರಿಸಿ
ಎಂ. ಇಸ್ಹಾಕ್ ಕೌಸರಿ
ಪರ್ಲೋಟು
- ishak
02 Feb 2015, 05:36 pm
Download App from Playstore: