ಕುಡಿದರೆನಾಯ್ತು ಅಪ್ಪನ ಪ್ರೀತಿ ಪ್ರೀತಿಯೆ ಅಲ್ಲವೆ

ಅಮ್ಮಾ ಜ್ವರ ಬಂದಿದೆ ಎಂದು ಹೇಳುತ್ತಲೇ ಪರೀಕ್ಷೆಗೆ ಹೊರಡಲು ತಯಾರಿಯಲ್ಲಿದ್ದ ಮಗಳು ಅಪ್ಪನ ನೋಡಿದ ಆಕೆ ಅಪ್ಪಾ ನನ್ನ ಪರೀಕ್ಷೆ ಮುಗಿಸುವಷ್ಟರಲ್ಲೆ ನಿನು ನನ್ನ ಕರೆಯಲು ಬರಲೆ ಬೇಕೆಂದು ಹಠ ಮಾಡುವಷ್ಟರಲ್ಲೆ ಶಾಲಾ ವಾಹನ ಬಂದಿತ್ತು ಅಳುತ್ತಲೆ ಹೋರಟ ಮಗಳಿಗೆ ಪರೀಕ್ಷೆ ಚೆನ್ನಾಗಿ ಬರಿ ಮಗಳೇ ನಾ ನಿನ್ನ ಕರೆಯಲು ಸ್ವಲ್ಪ ಬೇಗನೆ ಬರುವೆ ಎಂದು ಹೇಳಿ ಮಗಳನ್ನ ಸಮಾಧಾನ ಮಾಡಿ ತನ್ನ ನಿತ್ಯದಂತೆ ಅಡವಿಗೆ ಹೋದ ಅಪ್ಪಾ.....
ಕೆಲಹೊತ್ತಾದ ಮೇಲೆ ಅಡವಿಯಿಂದ ಮನೆಗೆ ಬಂದ ಅಪ್ಪನಿಗೆ ನೆನಪಾದ ಮಮತೆಯ ಮಗಳ ಮಾತು... ಹೆಂಡತಿಗೆ ಹೇಳಿದನಂತೆ ಬೇಗ ಊಟ ಬಡಿಸು ಮಗಳ ಪರೀಕ್ಷೆ ಮುಗಿಯುವ ಸಮಯವಾಗಿದೆ ನಾ ಹೋಗಬೇಕೆಂದು ಆತುರದಿಂದಲೇ ಊಟ ಮುಗಿಸಿ ಹೋರಟ ಅಪ್ಪ ತನ್ನ ಗಂಡ ಕುಡಿದಿಲ್ಲವೆಂದು ಖುಷಿಯಿಂದಲೇ ಊಟ ಬಡಿಸಿದ ಹೆಂಡತಿಗೆ ಗೊತ್ತಿರಲಿಲ್ಲ ಮುಂದೆನಾಗುತ್ತೆ ಅನ್ನುವುದು.
ಇನ್ನೇನು ಶಾಲೆಗೆ ತಲಪುವಷ್ಟರಲ್ಲೆ ಗಮನ ಸೆಳೆದ ಕೆಟ್ಟ ಚಟ ಕುಡಿಯುವಂತೆ ಮಾಡಿ ನಶೆ ಮಾಡಿ ಬಿಟ್ಟಿತ್ತು ನಶೆಯಲ್ಲೆ ಶಾಲೆಗೆ ಹೋದ ಅಪ್ಪನನ್ನು ಮುಕ್ಯದ್ವಾರದಲ್ಲಿ ನಿಂತಿದ್ದ ಕಾವಲುಗಾರ ಒಳ ಹೋಗಲು ಬಿಡದ ಕಾರಣ ದ್ವಾರದ ಬಳಿಯೇ ಮಲಗಿರುತ್ತಾನೆ.
ಅಪ್ಪ ಬಂದಿರುತ್ತಾನೆಂದು ಪರೀಕ್ಷೆ ಮುಗಿಸಿ ಖುಷಿಯಿಂದ ಹೊರಬಂದ ಮಗಳು ನಶೆಯಲ್ಲಿದ್ದ ಅಪ್ಪನಿಗೆ ಹೊಡೆಯುತಿದ್ದ ಕಾವಲುಗಾರನ ಅಳುತ್ತಲೆ ತಡೆದು ಇವ್ರು ನಮ್ಮ ಅಪ್ಪಾ ಎಂದು ಹೇಳಿದ ಆಕೆ ಅಪ್ಪಾ.... ಎದ್ದೇಳಪ್ಪಾ... ಎಲ್ಲರು ಇ ಕಡೆಯೆ ನೋಡುತ್ತಿದ್ದಾರೆಂದು ಅಪ್ಪಣೆದೆಯ ಮೇಲೆ ಅಳುತ್ತಿದ್ದ ಆ ಮಗು ಹೋಗು ಬರುವವರಿಗೆಲ್ಲ ನಮ್ಮಪ್ಪನನ್ನ ಎಬ್ಬಿಸಿ...! ಏನಾಗಿದೆ ನೋಡಿ ಅಂಕಲ್ ಎಂದು ಗೋಗರೆದರೂ ಯಾರು ನೋಡಲೆ ಇಲ್ಲ ಆ ಮಗುವಿನ ಸಂಕಟ; ಕೆಲಕ್ಷಣಗಳ ಮೇಲೆ ಅಪ್ಪಣೆದೆಯ ಮೇಲೆ ಮಲಗಿಬಿಟ್ಟಿತ್ತು ಆ ಮಗು...!
ನಶೆಯಿಂದ ಹೊರಬಂದ ಅಪ್ಪನಿಗೆ ಕಂಡ ತನ್ನ ಕಂದಮ್ಮಗಳಿಗೆ ಬಿಗಿದಪ್ಪಿ ಅತ್ತು... ಮತ್ತೇ ಮನೆ ಕಡೆಗೆ ಹೋರಟ ಅಪ್ಪ ಮಗಳು...

- Shreya Ramaje

25 Apr 2025, 09:35 pm
Download App from Playstore: